ಜೂ.04: ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿಯಿಂದ ಉಚಿತ ಸಿಇಟಿ/ನೀಟ್ ಮಾರ್ಗದರ್ಶಿ ಕಾರ್ಯಾಗಾರ

0

ಪುತ್ತೂರು: ಅಬ್ಸಲ್ಯೂಟ್ ಲರ್ನಿಂಗ್ ಅಕಾಡೆಮಿ ವತಿಯಿಂದ ಒಂದು ದಿನದ ಉಚಿತ ಸಿಇಟಿ/ನೀಟ್ ಮಾರ್ಗದರ್ಶಿ ಕಾರ್ಯಾಗಾರ ಜೂ.04ರಂದು ಪೂರ್ವಾಹ್ನ 10 ಗಂಟೆಯಿಂದ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರಅಳಿಕೆ ಸತ್ಯಸಾಯಿ ಪದವಿಪೂರ್ವ ಕಾಲೇಜು ರಾಸಾಯನಶಾಸ್ತ್ರ ಉಪನ್ಯಾಸಕ ಪ್ರಮೋದ್ ಎಚ್., ನಿಟ್ಟೆ ಡಾ| ಎನ್‌ಎಸ್‌ಎಎಂ ಪದವಿಪೂರ್ವ ಕಾಲೇಜು ಭೌತಶಾಸ್ತ್ರ ಉಪನ್ಯಾಸಕ ಶರತ್ ಎನ್.ಕೆ.ರವರು ವಿದ್ಯಾರ್ಥಿಗಳಿಗೆ ಪೂರ್ವತಯಾರಿ, ಅಭ್ಯಾಸ ವಿಧಾನಗಳು ಮತ್ತು ಇತರೆ ಅಂಶಗಳ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಾಗಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅರ್ಹತೆ, ಮಾನದಂಡಗಳು, ಮೀಸಲಾತಿ, ಅಗತ್ಯ ದಾಖಲೆಗಳು, ಕೌನ್ಸೆಲಿಂಗ್ ಮತ್ತು ಪರಿಶೀಲನೆಗಳು ಕುರಿತಾದ ಹೆಚ್ಚುವರಿ ಮಾಹಿತಿಗಳನ್ನು ಒಳಗೊಂಡಿರುತ್ತದೆ. ವಿದ್ಯಾರ್ಥಿಗಳು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9448722839, 9535622839 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here