ಮೇ 31: ಕೆಯ್ಯೂರಿನಲ್ಲಿ 19ನೇ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ದತ್ತಿ ನಿಧಿ ಕಾರ್ಯಕ್ರಮ

0

ಪುತ್ತೂರು: 2019ರಲ್ಲಿ ಕೆಯ್ಯೂರಿನಲ್ಲಿ ನಡೆದ 19ನೆಯ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸವಿನೆನಪಿಗಾಗಿ ಇರಿಸಿದ ದತ್ತಿನಿಧಿ ಕಾರ್ಯಕ್ರಮವು ಮೇ 31 ರಂದು ಕೆಯ್ಯೂರಿನ ಕೆಪಿಎಸ್ ಶಾಲೆಯಲ್ಲಿ ನಡೆಯಲಿದೆ.

ವಿವೇಕಾನಂದ ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಶೋಭಿತಾ ಸತೀಶ್ ಅವರು ‘ಶಿಕ್ಷಣದಲ್ಲಿ ಸಾಹಿತ್ಯ ಮತ್ತು ಸಂಗೀತದ ಪಾತ್ರ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ನೆರೆವೇರಿಸಲಿದ್ದಾರೆ. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಮತ್ತು ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ, ಎ. ಕೆ. ಜಯರಾಮ್ ರೈ, ದಂಬೆಕಾನ ಸದಾಶಿವ ರೈ, ಬಿ. ಐತ್ತಪ್ಪ ನಾಯ್ಕ್, ಎಸ್. ಬಿ. ಜಯರಾಮ ರೈ, ಚರಣ್ ಕುಮಾರ್ ಸಣ್ಣಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕಸಾಪ ಪುತ್ತೂರು ತಾಲೂಕು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here