





ನಿಡ್ಪಳ್ಳಿ; ಅಜ್ಜಿಕಲ್ಲು ಮುಂಡೊದಮೂಲೆ ನಂದಗೋಕುಲ ಅಂಗನವಾಡಿ ಕೇಂದ್ರದಿಂದ 1 ನೇ ತರಗತಿಗೆ ಹೋಗುವ ಮಕ್ಕಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮೆ.30 ರಂದು ನಡೆಯಿತು.


ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ,ಅಂಗನವಾಡಿ ಕೇಂದ್ರಕ್ಕೆ ನಮ್ಮ ಸ್ಥಳೀಯ ಮಕ್ಕಳನ್ನು ಕಳುಹಿಸಲು ಪ್ರೋತ್ಸಾಹಿಸಿ ಎಂದು ಹೇಳಿದರು.





ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹರಿಣಾಕ್ಷಿ ಇವರು ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.1ನೇ ತರಗತಿಗೆ ಸೇರುವ ಮಕ್ಕಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಮತ್ತು ಮಕ್ಕಳ ಹೆತ್ತವರು ಅನಿಸಿಕೆ ವ್ಯಕ್ತಪಡಿಸಿದರು.

ಬೀಳ್ಕೊಡುವ ಮಕ್ಕಳಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಹೆತ್ತವರಾದ ಚಂದ್ರಿಕಾ ಲೋಕೇಶ್ ರೈ ಮೊಡಪ್ಪಾಡಿ ಹಾಗೂ ಆಶ್ರಫ್ ಅಜ್ಜಿಕಲ್ಲು ಸಿಹಿ ತಿಂಡಿ ಒದಗಿಸಿದರು. ಪಂಚಾಯತ್ ಸದಸ್ಯರಾದ ವನಿತಾ ಮತ್ತು ಸಂಜೀವಿನಿ ಒಕ್ಕೂಟದ ಎಂ. ಬಿ. ಕೆ . ಚಂದ್ರಿಕಾ ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಮಾನ್ವಿ ರೈ, ಜೆನಿಶ, ಧನ್ವಿತ್ ಪ್ರಾರ್ಥಿಸಿ,ಅಂಗನವಾಡಿ ಕಾರ್ಯಕರ್ತೆ ಗೀತಾ ಸ್ವಾಗತಿಸಿ, ವಂದಿಸಿದರು.ಸಹಾಯಕಿ ರತಿ ಮತ್ತೀತರರು ಸಹಕರಿಸಿದರು.





