ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ!

0

ವಿಚಾರಿಸಿದ ಪತ್ರಕರ್ತನೊಂದಿಗೆ ಸಿಬ್ಬಂದಿ ಅನುಚಿತ ವರ್ತನೆ-ಆರೋಪ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ.

ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿ ವಿಲೇವಾರಿ ಆಗಲಿಲ್ಲ ಈ ಬಗ್ಗೆ ಪತ್ರಕರ್ತ ಪ್ರವೀಣ್ ಎಂಬವರು ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಸಿಬ್ಬಂದಿ ಲಿಖೇಶ್ ಎಂಬವರ ಬಳಿ ಕಡತದ ಬಗ್ಗೆ ವಿಚಾರಿಸಿದ ವೇಳೆ ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ ಬರಬೇಡಿ ಎಂದು ಹೇಳಿದರಲ್ಲದೆ ಕಡತ ಬೇಕಾದರೆ ಉಪತಶೀಲ್ದಾರ, ಟಪಾಲು ನಿರ್ವಹಣೆ ಮಾಡುವ ಸಿಬ್ಬಂದಿ ಜೊತೆ ಅಲ್ಲಿ ವಿಚಾರಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ಪತ್ರಕರ್ತ ಪ್ರವೀಣ್ ತಹಶೀಲ್ದಾರ್‌ ಮತ್ತು ಉಪತಹಶೀಲ್ದಾರ್ ಅವರಿಗೆ ಮೌಖಿಕ ದೂರು ನೀಡಿದ್ದರು.

ಕಡತ ಪರಿಶೀಲಿಸಿ ವಿಲೆವಾರಿ ಮಾಡಲಾಗುವುದು ರಮೇಶ್ ಬಾಬು
ಸುಬ್ರಮಣ್ಯದ ಮಹಿಳೆಯೊಬ್ಬರ ಕಡತ ಮೇ.24ಕ್ಕೆ ಕಂದಾಯ ನಿರೀಕ್ಷಕರಿಂದ ಬಂದಿದೆ. ಮುಂದೆ ನಾನು ಪರಿಶೀಲನೆ ಮಾಡಿ ವಿಲೇವಾರಿ ಮಾಡುತ್ತೇನೆ. ಸಿಬ್ಬಂದಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ಮಾಹಿತಿ ಕ್ರಮ ಕೈಗೊಳ್ಳುತ್ತೇನೆ ಎಂದು ಕಡಬ ತಹಶೀಲ್ದಾರ್‌ ರಮೇಶ್‌ ಬಾಬು ಹೇಳಿದ್ದಾರೆ

LEAVE A REPLY

Please enter your comment!
Please enter your name here