ಸಬ್ ರಿಜಿಸ್ಟರ್ ಕಚೇರಿಯಲ್ಲಿ ಜೆರಾಕ್ಸ್ ಯಂತ್ರ ಸರಿ ಇಲ್ಲವೆಂದು ಅನಧಿಕೃತ ಶುಲ್ಕ ವಸೂಲಿ-ದೂರು

0

ಪುತ್ತೂರು: ಜೆರಾಕ್ಸ್ ಯಂತ್ರ ಸರಿ ಇಲ್ಲ ಎಂದು ಪುತ್ತೂರು ಸಬ್ ರಿಜಿಸ್ಟರ್ ಅವರ ಕಛೇರಿಯಲ್ಲಿ ಅನಧಿಕೃತ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ಪುತ್ತೂರು ಶಾಸಕರಿಗೆ ಮತ್ತು ಬೆಂಗಳೂರು ಮುದ್ರಾಂಕಗಳ ಆಯುಕ್ತರ ಕಛೇರಿಗೆ ದೂರು ಸಲ್ಲಿಸಲಾಗಿದೆ.

ಸಾರ್ವಜನಿಕರು ತಮಗೆ ಅವಶ್ಯವಿರುವ ದಾಖಲೆ ಪತ್ರಗಳ ಯಥಾ ನಕಲಿಗೆ ಈ ಕಛೇರಿಗೆ ಅರ್ಜಿ ಸಲ್ಲಿಸಿದಾಗ ಇದಕ್ಕೆ ಪಾವತಿಸಬೇಕಾದ ಶುಲ್ಕಗಳನ್ನು ಬ್ಯಾಂಕುಗಳಲ್ಲಿ ಪಾವತಿಸುವ ಹೊಸ ಪದ್ಧತಿ ಇತ್ತೀಚೆಗೆ ಜಾರಿಗೆ ಇರುತ್ತದೆ. ಆದುದರಿಂದ ಯಾವುದೇ ಶುಲ್ಕಗಳನ್ನು ಈ ಕಛೇರಿಯಲ್ಲಿ ಪಾವತಿಸುವ ಅವಕಾಶ ಇರುವುದಿಲ್ಲ. ಆದರೂ ತಮ್ಮ ದಾಖಲೆ ಪತ್ರಗಳನ್ನು ಪಡೆದುಕೊಳ್ಳಲು ಜನ ಕಛೇರಿಗೆ ಹೋದಾಗ ನಮ್ಮಲ್ಲಿ ಜೆರಾಕ್ಸ್ ಯಂತ್ರ ಸರಿ ಇಲ್ಲ. ಅದಕ್ಕೆ ಇಂತಿಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದು ಅನಧಿಕೃತವಾಗಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕಾಗಿ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಕಲಿಯುಗ ಸೇವಾಸಮಿತಿ ಸಂಚಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here