ಶಿವಳ್ಳಿ ಸಂಪದ ನರಿಮೊಗರು ವಲಯದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಶಿವಳ್ಳಿ ಸಂಪದ ನರಿಮೊಗರು ವಲಯದ ವಾರ್ಷಿಕ ಮಹಾಸಭೆ ಮತ್ತು 2023-25 ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಕಲ್ಲಮ ಶ್ರೀ ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆಯಿತು. ವಲಯಧ್ಯಕ್ಷ ರಾಧಾಕೃಷ್ಣ ಪುತ್ತೂರಾಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗತ ವರ್ಷದ ವರದಿಯನ್ನು ಕಾರ್ಯದರ್ಶಿ ಪ್ರಕಾಶ ಕೊಡಂಕಿರಿ ಮತ್ತು ಲೆಕ್ಕಪತ್ರವನ್ನು ಕೋಶಾಧಿಕಾರಿ ಸುಧೀಂದ್ರ ಅಡಿಗ ಮಂಡಿಸಿದರು.

ಎಸ್ಸೆಸ್ಸೆಲ್ಸಿ, ಪಿಯುಸಿ, ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದವರನ್ನು ಗೌರವಿಸಲಾಯಿತು. ನಂತರ 2023-25ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಶಿವಳ್ಳಿ ಸಂಪದ ನರಿಮೊಗರು ವಲಯದ ನೂತನ ಅಧ್ಯಕ್ಷರಾಗಿ ಸುಧೀರ್ ಕೃಷ್ಣ ಪಡ್ಡಿಲ್ಲಾಯ, ಕಾರ್ಯದರ್ಶಿಯಾಗಿ ರೂಪೇಶ್ ಕಣ್ಣಾರಾಯ ಹಾಗೂ ಕೋಶಾಧಿಕಾರಿಯಾಗಿ ಸುಧೀಂದ್ರ ಅಡಿಗ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪ್ರಶಾಂತ್ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಅಚ್ಚುತ ಪಾಂಗಣ್ಣಾಯ, ತಾಲೂಕು ಪ್ರತಿನಿಧಿಯಾಗಿ ಹರೀಶ್ ಪುತ್ತೂರಾಯ, ಲಕ್ಷ್ಮೀನಾರಾಯಣ ಕಡಂಬಳಿತ್ತಾಯ, ರಾಧಾಕೃಷ್ಣ ಪುತ್ತೂರಾಯ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಶ್ರೀ ಕೃಷ್ಣ ಪ್ರಸಾದ ಕೆದಿಲಾಯ, ರಾಜರಾಮ ನೆಲ್ಲಿತ್ತಾಯ, ರಾಘವೇಂದ್ರ ಅಂಗಿಂತ್ತಾಯ, ಸುಜಯ್ ತಂತ್ರಿ, ಸುಧೀರ್ ಹೆಬ್ಬಾರ್, ಸುಧೀರ್ ತೋಳ್ಪಾಡಿ, ಶಿವರಾಮ ಕಲ್ಲೂರಾಯರನ್ನು ಆಯ್ಕೆ ಮಾಡಲಾಯಿತು. ಸಂಪದದ ಗೌರವಾಧ್ಯಕ್ಷರಾದ ಜಯರಾಮ ಕೆದಿಲಾಯ ಹಾಗೂ ತಾಲೂಕು ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ, ತಾಲೂಕು ಪ್ರ.ಕಾರ್ಯದರ್ಶಿ ಸತೀಶ್ ಕೆದಿಲಾಯ, ಪೂರ್ವ ಅಧ್ಯಕ್ಷರುಗಳಾದ ಬಾಲಕೃಷ್ಣ ಕಣ್ಣಾರಾಯ, ಶ್ರೀ ಕೃಷ್ಣಪ್ರಸಾದ ಕೆದಿಲಾಯ, ಹರೀಶ್ ಪುತ್ತೂರಾಯ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here