ಅವೈಜ್ಞಾನಿಕ ಮಣ್ಣು ಅಗೆತ ಸ್ಥಳದಲ್ಲಿ ಗುಡ್ಡ ಕುಸಿದರೆ ಜಮೀನು ಮಾಲಕರ ವಿರುದ್ಧ ಕ್ರಮ-ನಗರಸಭೆ ಎಚ್ಚರಿಕೆ

0

ಪುತ್ತೂರು: ನಗರಸಭೆ ವ್ಯಾಪ್ತಿಯ ಕೆಲವೊಂದು ಕಡೆಗಳಲ್ಲಿ ಅವೈಜ್ಞಾನಿಕವಾಗಿ ಗುಡ್ಡೆಗಳ ಮಣ್ಣು ಅಗೆತದಿಂದ ಆ ಸ್ಥಳದಲ್ಲಿ ದುರಂತ ಸಂಭವಿಸಿದರೆ ಜಮೀನುದಾರರೇ ಹೊಣೆಯಾಗುತ್ತಾರೆ.ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರಂತೆ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಜಮೀನುಗಳನ್ನು ಸಮತಟ್ಟು ಮಾಡಲು ಕೆಲವು ಕಡೆ ಗುಡ್ಡೆಗಳನ್ನು ಜರಿಸಿದ್ದಾರೆ. ಇಂತಹ ಸ್ಥಳಗಳಲ್ಲಿ ಮಳೆಗಾಲದಲ್ಲಿ ಧರೆ ಕುಸಿದು ಬಿದ್ದು ಜೀವ ಹಾನಿ ಸಂಭವಿಸಿದ ಪ್ರಕರಣಗಳು ವರದಿಯಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಮಳೆಗಾಲ ಪ್ರಾರಂಭವಾಗುವ ಪೂರ್ವದಲ್ಲಿ ಇಂತಹ ಸ್ಥಳಗಳಲ್ಲಿ ಜಮೀನಿನ ಮಾಲಕರು ಸಂಭವನೀಯ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಸ್ವತಃ ಕಲ್ಪಿಸಲು ತಿಳಿಯಪಡಿಸಲಾಗಿದೆ. ಅದಾಗ್ಯೂ ಅನಾಹುತಗಳು ಸಂಭವಿಸಿದಲ್ಲಿ ಅದಕ್ಕೆ ಜಮೀನು ಮಾಲಕರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here