ಕೈಕಾರ: ಅಕ್ರಮ ಮದ್ಯ ಮಾರಾಟ-ಓರ್ವ ವಶಕ್ಕೆ

0

ಪುತ್ತೂರು: ಗುಡ್ಡದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಮಂಜುನಾಥ್‌ರವರ ನಿರ್ದೇಶನದಂತೆ ದಾಳಿ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಒಳಮೊಗ್ರು ಗ್ರಾಮದ ಕೈಕಾರದ ಪನಡ್ಕ ಎಂಬಲ್ಲಿ ಗುಡ್ಡದಲ್ಲಿ ಅಕ್ರಮವಾಗಿ ಮದ್ಯವನ್ನು ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಕೈಕಾರ ಪನಡ್ಕ ನಿವಾಸಿ ವಿನಯ್ ಕುಮಾರ್ ಎಂಬವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನ ಬಳಿಯಿದ್ದ 16 ಲೀಟರ್ ಮದ್ಯ ಸುಮಾರು 5 ಸಾವಿರ ರೂ.ಮೌಲ್ಯದ ಮದ್ಯದ ಬಾಟಲಿಗಳು ಹಾಗೂ ಮದ್ಯ ಮಾರಾಟದಿಂದ ಬಂದ ರೂ.419 ಅನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿ ವಿರುದ್ಧ ಕಲಂ 32(1),32(2)ಚಿ) ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಸುಬ್ರಹ್ಮಣ್ಯ, ಪಿಎಸ್‌ಐ ಮುರುಗೇಶ್, ಅದ್ರಾಮ್, ಪ್ರವೀಣ್ ರೈ, ಗಾಯತ್ರಿ, ಜೀಪು ಚಾಲಕ ಯೋಗಿಶ್ ಸಹಕರಿಸಿದ್ದರು.

LEAVE A REPLY

Please enter your comment!
Please enter your name here