ರಾಮಕುಂಜ ಮಹಾವಿದ್ಯಾಲಯದಲ್ಲಿ ಉದ್ಯೋಗ ಮಾರ್ಗದರ್ಶನ

0

ರಾಮಕುಂಜ: ಖ್ಯಾತ ಉದ್ಯೋಗ ಮಾರ್ಗದರ್ಶಕ, ತರಬೇತುದಾರ ಸುನೀಲ್ ಜಾನ್ ಜಾರ್ಜ್ ರವರು ಯಶಸ್ಸಿನ ಸಾಧನೆಗೆ ಕಠಿಣ ಪ್ರಯತ್ನಕ್ಕೆ ಮಿಗಿಲಾದ ಮಾರ್ಗವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಿದ ಉದ್ಯೋಗ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಜಾಗತಿಕವಾಗಿ ಉದ್ಯೋಗದ ಅವಕಾಶಗಳು ವಿಪುಲವಾಗಿವೆ. ಕೇವಲ ಪಠ್ಯಪುಸ್ತಕ, ಅಂಕಗಳಿಕೆಗಳಲ್ಲಿ ಕಳೆದುಹೋಗದಿರಿ. ಕೌಶಲ ಮತ್ತು ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳಿ ಎಂದು ಅವರು ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿದರು. ಕಾರ್ಯಕ್ರಮವನ್ನು ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕ, ಕಲಾಸಂಘಗಳು ಮಂಗಳೂರಿನ ಕ್ಯಾರಿಯರ್ ಡೆಸ್ಟಿನಿ ಸಂಸ್ಥೆಯ ಸಹಯೋಗದಿಂದ ನಡೆಸಿದವು. ಡೆಸ್ಟಿನಿ ವತಿಯಿಂದ ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಂಶುಪಾಲ ಗಣರಾಜ ಕುಂಬ್ಳೆ, ಉಪನ್ಯಾಸಕ ಕೃಷ್ಣಪ್ರಸಾದ್ ಹಾಗೂ ದಯಾನಂದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here