ಪುತ್ತೂರು: ಪವಾಡ ಪುರುಷ ಸಂತರಾದ ಸಂತ ಅಂತೋನಿಯವರು ಜೂ.13ರಂದು ಇಹಲೋಕವನ್ನು ತ್ಯಜಿಸಿ ಸ್ವರ್ಗಕ್ಕೇರಿದ ದಿನವನ್ನು ಬನ್ನೂರು ಸಂತ ಅಂತೋನಿ ಚರ್ಚ್‌ನಲ್ಲಿ ಪ್ರತಿವರ್ಷ ವಾರ್ಷಿಕ ಹಬ್ಬವಾಗಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಮೇ 31ರಿಂದ ಜೂ.12ರ ತನಕ 13 ದಿನಗಳ ವಿಶೇಷ ಪ್ರಾರ್ಥನೆ(ನವೇನಾ)ಯು ಪ್ರಾರಂಭಗೊಂಡಿದೆ. ಭಕ್ತಾಧಿಗಳು ಆಗಮಿಸಿ ತಮ್ಮ ಬೇಡಿಕೆ, ಹರಕೆಗಳನ್ನು ಪವಾಡ ಪುರುಷ ಸಂತ ಅಂತೋನಿಯವರ ಮೂಲಕ ದೇವರಿಗೆ ಸಮರ್ಪಿಸಿ ವಿಶೇಷ ವರ ಪಡೆದುಕೊಳ್ಳಬಹುದು ಎಂದು ಚರ್ಚ್ ಧರ್ಮಗುರು ಬಾಲ್ತಜಾರ್ ಪಿಂಟೋರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.