ಒಡಿಯೂರು ಶ್ರೀ ವಿವಿಧ ಬಳಗದ ವಾರ್ಷಿಕೋತ್ಸವ-ಸತ್ಯದತ್ತ ವೃತ ಪೂಜಾ ಕಾರ್ಯಕ್ರಮ ಬಗ್ಗೆ ಪೂರ್ವಭಾವಿ ಸಭೆ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಬಳಗ , ವಜ್ರಮಾತಾ ಮಹಿಳಾ ಮಂಡಳಿ , ಗ್ರಾಮ ವಿಕಾಸ ಯೋಜನೆ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಇವುಗಳ ಆಶ್ರಯದಲ್ಲಿ ಮಹೋತಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಹಯೋಗದೊಂದಿಗೆ ದೇವಾಲಯದ ಮುಂಭಾಗದ ನಟರಾಜ ವೇದಿಕೆ ಇಲ್ಲಿ ಜೂ.6 ರಂದು ಒಡಿಯೂರು ಶ್ರೀ ಬಳಗದ ವಾರ್ಷಿಕೋತ್ಸವದ ಪ್ರಯುಕ್ತ ಸತ್ಯ ದತ್ತ ವೃತ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮ ಕ್ರಮದ ರೂಪುರೇಷೆ ಬಗ್ಗೆ ಪೂರ್ವಭಾವಿ ಸಭೆಯೂ ಜೂ.3 ರಂದು ಹೊಟೇಲ್ ಲಕ್ಷ್ಮೀ ಇದರ ಸಭಾಂಗಣದಲ್ಲಿ ನಡೆಯಿತು.


ಗುರು ದೇವಾ ಸೇವಾ ಬಳಗದ ಗೌರವ ಸಲಹೆಗಾರ ಜಯಪ್ರಕಾಶ್ ರೈ ,ಗುರುದೇವಾ ಸೇವಾ ಬಳಗದ ನೂತನ ಅಧ್ಯಕ್ಷ ಸುಧೀರ್ ನೊಂಡಾ , ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ , ಗುರು ದೇವಾ ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ , ದೇವಿ ಪ್ರಸಾದ್ ಶೆಟ್ಟಿ ,ಆಶೋಕ್ ಕುಮಾರ್ ರೈ , ವಿಶ್ವನಾಥ ಶೆಟ್ಟಿ , ಸವಿತಾ ರೈ , ಅಂಬಿಕಾ ರಮೇಶ್ , ಪವಿತ್ರ ಎನ್ , ಸುನಂದ ರೈ ಹಾಗೂ ಶಶಿ ಡಿ ಮತ್ತು ಸುಜಾತ ಜಿ ಮೊದಲಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here