ನೆಲ್ಯಾಡಿ: ಬೈಕ್ ಪಲ್ಟಿ, ಸಹಸವಾರನಿಗೆ ಗಾಯ

0

ನೆಲ್ಯಾಡಿ: ನೆಲ್ಯಾಡಿ-ಪಡಡ್ಕ ರಸ್ತೆಯ ನೆಲ್ಯಾಡಿ ಸಂತೆಕಟ್ಟೆ ಬಳಿ ಬೈಕ್ ಪಲ್ಟಿಯಾಗಿ ಸಹ ಸವಾರ ಗಾಯಗೊಂಡಿರುವ ಘಟನೆ ಮೇ.27ರಂದು ರಾತ್ರಿ ನಡೆದಿದ್ದು ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸಹಸವಾರ ಮೊಹಮ್ಮದ್ ಜಿಯಾದ್ ಎಂಬವರು ಗಾಯಗೊಂಡವರಾಗಿದ್ದಾರೆ. ಸವಾರ ಸಲೀಂ ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರು ನೆಲ್ಯಾಡಿ ಕಡೆಯಿಂದ ಪಡಡ್ಕ ಕಡೆಗೆ ಬಂದಿದ್ದು ಪಡಡ್ಕ ರಸ್ತೆಯಲ್ಲಿ ನೆಲ್ಯಾಡಿ ಸಂತೆಕಟ್ಟೆ ಬಳಿ ತಲುಪುತ್ತಿದ್ದಂತೆ ಬೈಕ್ ಪಲ್ಟಿಯಾಗಿದೆ. ಘಟನೆಯಲ್ಲಿ ಬೈಕ್ ಸಹ ಸವಾರ ಮೊಹಮ್ಮದ್ ಜಿಯಾದ್ ಅವರಿಗೆ ಗಾಯವಾಗಿದೆ. ಈ ಬಗ್ಗೆ ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ ಹೈದರ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ: 279,337 ಭಾ.ದಂ.ಸಂ ಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here