ವಿದ್ಯುತ್‌ ಬೆಲೆ ಏರಿಕೆ – ರಾಜ್ಯದ ಜನತೆಗೆ ಶಾಕ್‌ ನೀಡಿದ ಇಂಧನ ಇಲಾಖೆ

0

ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಜೊತೆಜೊತೆಗೆ ವಿದ್ಯುತ್ ದರ ಏರಿಸುವ ಮೂಲಕ ಶಾಕ್ ನೀಡಿದೆ.  ಪ್ರತಿ ಯುನಿಟ್‌ ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್‌ ಸಿ ಆದೇಶ ಹೊರಡಿಸಿದೆ.

ಎಪ್ರಿಲ್‌ ತಿಂಗಳಿನಲ್ಲಿಯೇ ಪ್ರತೀ ಯುನಿಟ್‌ ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್ ಸಿ ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಈ ಆದೇಶವನ್ನು ತಡೆ ಹಿಡಿಯಲಾಗಿತ್ತು. ಈಗ ಸಿದ್ದರಾಮಯ್ಯ ನೇತೃತ್ವದ ನೂತನ ಸರಕಾರ ಅಧಿಕಾರಕ್ಕೆ ಬಂದಿದ್ದು, ಜುಲೈ 1ರಿಂದ ಹೊಸ ಪರಿಷೃತ ದರ ಜಾರಿಯಾಗಲಿದೆ. ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಲು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here