ಪಾಣಾಜೆ :ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ 

0

ಪಾಣಾಜೆ: ಆರ್ಲಪದವು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಇದರ ಭಜನಾ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಭಜನಾ ಮಂದಿರದ ವಠಾರದಲ್ಲಿ ಜೂ.4 ರಂದು ನಡೆಯಿತು.

ಬೆಳಿಗ್ಗೆ ದೀಪ ಪ್ರತಿಷ್ಠೆ ನಂತರ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಅರ್ಲಪದವು,ಶ್ರೀದೇವಿ ಭಜನಾ ಸಂಘ  ಸುಂದರಗಿರಿ, ರಣಮಂಗಲ ಶ್ರೀ ಸುಬ್ರಹ್ಮಣ್ಯ ಭಜನಾ ಸಂಘ, ಶ್ರೀದೇವಿ ಭಜನಾ ಮಂಡಳಿ ಬೊಳ್ಳಿಂಬಳ, ಕಾರ್ತಿಕೇಯ ಮಹಿಳಾ ಭಜನಾ ಸಂಘ ಅರ್ಲಪದವು, ಸಿಂಧೂರ ಮಹಿಳಾ ಭಜನಾ ಸಂಘ , ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಬೆಟ್ಟಂಪಾಡಿ, ವೆಂಕಟರಮಣ ದುರ್ಗಾಪರಮೇಶ್ವರಿ ಭಜನಾ ಸಂಘ  ಭರಣ್ಯ ,ಕೇಸರಿ ಭಜನಾ ತಂಡ ಮಿತಡ್ಕ, ಶ್ರೀ ಸುಬ್ರಹ್ಮಣ್ಯೇಶ್ವರ ವನಿತಾ ಭಜನಾ ಮಂಡಳಿ ಕಾಟುಕುಕ್ಕೆ, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘ ಉದಯಗಿರಿ ,ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಆರ್ಲಪದವು ತಂಡಗಳಿಂದ ಭಜನೆ ನಡೆಯಿತು. 

ಮಂಡಳಿಯ ಅಧ್ಯಕ್ಷ ಪಿ. ಜಿ ಶಂಕರನಾರಾಯಣ ಭಟ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here