ಉಪ್ಪಿನಂಗಡಿ; ಬಜತ್ತೂರು ಗ್ರಾಮದ ಹೊಸಗದ್ದೆ ಬೂತ್ ವ್ಯಾಪ್ತಿಯಲ್ಲಿ ಪುತ್ತಿಲ ಪರಿವಾರದ ಶಾಖೆಯೊಂದು ಆರಂಭಗೊಂಡಿದ್ದು, ಇದೀಗ ಸಾಮಾಜಿಕ ಸೇವೆಯ ಮೂಲಕ ತನ್ನ ಚಟುವಟಿಕೆ ಪ್ರಾರಂಭ ಮಾಡಿದೆ.
ಕಾಂಚನ ರಸ್ತೆಯಿಂದ ಪಂರ್ದಾಜೆ ಪ್ರದೇಶಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಹೊಂಡಗಳು ತುಂಬಿದ್ದು, ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಮನಿಸಿದ ಪುತ್ತಿಲ ಪರಿವಾರದ ತಂಡ ಹೊಂಡಗಳನ್ನು ಮಣ್ಣು ತುಂಬಿಸಿ ಮುಚ್ಚುವ ಮೂಲಕ ರಸ್ತೆಯನ್ನು ವಾಹನ ಸವಾರರಿಗೆ ಸರಾಗವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ರಸ್ತೆ ದುರಸ್ಥಿ ನಡೆಸುವಂತೆ ಬಜತ್ತೂರು ಗ್ರಾ.ಪಂ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಲಾಗಿತ್ತು. ಬಜತ್ತೂರು ಗ್ರಾ.ಪಂ ಸದಸ್ಯರೊಬ್ಬರ ಮನೆಗೂ ಇದೇ ಸಂಪರ್ಕ ರಸ್ತೆಯಾಗಿದೆ. ಆದರೆ ರಸ್ತೆ ದುರಸ್ಥಿಯಾಗಗೆ ಜನತೆಯ ಓಡಾಟಕ್ಕೆ ಸಂಕಷ್ಟ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಹೊಸಗದ್ದೆ ಬೂತ್ ಮಟ್ಟದ ಪುತ್ತಿಲ ಪರಿವಾರ ಸಂಘಟನೆ ವತಿಯಿಂದ ಶ್ರಮದಾನದ ಮೂಲಕ ರಸ್ತೆ ದುರಸ್ಥಿಗೊಳಿಸುವ ಕಾರ್ಯಾಚರಣೆ ನಡೆಸಲಾಯಿತು. ನಾಗೇಶ್ ಮಾಯಿತಾಲ್, ಗಣೇಶ್ ಪಂರ್ದಾಜೆ ಮತ್ತಿತರರು ತಂಡದ ನೇತೃತ್ವ ವಹಿಸಿದ್ದರು.