ಆಸ್ಟ್ರೇಲಿಯಾದ ರೋಟರಿ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ರೋಟರಿ ಯುವದಿಂದ ಗೌರವಾರ್ಪಣೆ

0

ಪುತ್ತೂರು: ಆಸ್ಟ್ರೇಲಿಯಾದ ಮೆಲ್ಬೊರ್ನ್‌ನಲ್ಲಿ ಮೇ 27ರಿಂದ ನಡೆದ 5 ದಿವಸಗಳ ಅಂತರಾಷ್ಟ್ರೀಯ ರೋಟರಿ ಸಮ್ಮೇಳನದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ವತಿಯಿಂದ ಅಂತರಾಷ್ಟ್ರೀಯ ಅಧ್ಯಕ್ಷರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.


ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷೆ ಜೆನಿಫರ್ ಜೋನ್ಸ್ ಮತ್ತು ನಿಯೋಜಿತ ಅಂತರಾಷ್ಟ್ರೀಯ ಅಧ್ಯಕ್ಷ ಜೋರ್ಡನ್ ಮೆಕ್ನಾಲಿ ಅವರನ್ನು ರೋಟರಿ ಕ್ಲಬ್ ಪುತ್ತೂರು ಯುವದ ಪರವಾಗಿ ವಲಯ ಸೇನಾನಿ ಹರ್ಷಕುಮಾರ್ ರೈ ಮಾಡಾವು ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್, ರೋಟರಿ ಪುತ್ತೂರು ಸಿಟಿಯ ಕಾರ್ಯದರ್ಶಿ ಜಯಗುರು ಆಚಾರ್ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಮೈಸೂರಿನ ಹಲವು ರೋಟರಿ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಗತ್ತಿನ 120 ದೇಶಗಳ ಸುಮಾರು 14 ಸಾವಿರ ರೋಟರಿ ಸದಸ್ಯರು ಈ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಸ್ನೇಹ ಪೂರ್ವಕವಾಗಿ ಪುತ್ತೂರು ರೋಟರಿ ಕ್ಲಬ್‌ಗಳ ಭಾವುಟಗಳನ್ನು ಬೇರೆ ದೇಶಗಳ ರೋಟರಿ ಕ್ಲಬ್ ಗಳೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳಲಾಯಿತು. ರೋಟರಿ ಜೆಲ್ಲೆ 3181ರ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ನೇತೃತ್ವದಲ್ಲಿ ಹರ್ಷಕುಮಾರ್ ರೈ ಮಾಡಾವು ಸಂಚಾಲಕರಾಗಿ ಇದೇ ಮೊದಲ ಬಾರಿಗೆ “ಡಿಸ್ಕವರಿ ಆಸ್ಟ್ರೇಲಿಯಾ” ಎನ್ನುವ ಅಂತರಾಷ್ರ್ರೀಯ ಸಮ್ಮೇಳನದ ಪ್ರವಾಸವನ್ನು ಹಮ್ಮಿಕೊಳ್ಳಲಾಗಿತ್ತು.

LEAVE A REPLY

Please enter your comment!
Please enter your name here