ಈಶ್ವರಮಂಗಲ :ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನ

0

ಪುತ್ತೂರು :ಈಶ್ವರಮಂಗಲ ಶ್ರೀ ಗಜಾನನ ವಿದ್ಯಾಸಂಸ್ಥೆಯಲ್ಲಿ ಜೂನ್ 5ರಂದು ವಿಶ್ವ ಪರಿಸರ ದಿನ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಶಿಕ್ಷಕಿ ವಂದನಾ ಇಂದಿನ ತಂತ್ರಜ್ಞಾನದ ಯುಗದಲ್ಲಿ ’54’ ರ ಮಹತ್ವದ ಜೊತೆಗೆ ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರದ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಕೆ. ಶಾಮಣ್ಣ ವಿಶ್ವಪರಿಸರ ದಿನದ ಮಹತ್ವವನ್ನು ತಿಳಿಸಿದರು. ತನಿಷಾ ಮತ್ತು ಬಳಗದವರು ಸುಂದರವಾದ ಪರಿಸರ ಗೀತೆಯನ್ನು ಹಾಡಿದರು. 10ನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿ, 8ನೇ ತರಗತಿಯ ಕಾವ್ಯ ಜಿ ರಾವ್ ಸ್ವಾಗತಿಸಿ, ಅನನ್ಯ ಎ ವಂದಿಸಿ, ರಿಯಾ ಬಿನಾಯ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here