ಶಿರಾಡಿ ಗ್ರಾ.ಪಂ.ಮಾಜಿ ಸದಸ್ಯ ಜಯಪ್ರಕಾಶ್ ನಿಧನ

0

ನೆಲ್ಯಾಡಿ: ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿರಾಡಿ ಗ್ರಾ.ಪಂ.ಮಾಜಿ ಸದಸ್ಯ, ಶಿರಾಡಿ ಗ್ರಾಮದ ಪಾದಡ್ಕ ನಿವಾಸಿ ಜಯಪ್ರಕಾಶ್(71ವ.)ರವರು ಜೂ.5ರಂದು ಸಂಜೆ ನಿಧನರಾಗಿದ್ದಾರೆ.

ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಜಯಪ್ರಕಾಶ್ ಅವರು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಜೂ.5ರಂದು ಸಂಜೆ ಅವರು ನಿಧನರಾದರು. ಜಯಪ್ರಕಾಶ್ ಅವರು 2010ರಿಂದ 2015ರ ಅವಽಯಲ್ಲಿ ಶಿರಾಡಿ ಗ್ರಾ.ಪಂ.ಸದಸ್ಯರಾಗಿದ್ದರು. ಮೃತರು ಪುತ್ರಿಯರಾದ ಶ್ರೀಜಾ, ಶಿಲ್ಪಾ ಹಾಗೂ ಅನನ್ಯ ಅವರನ್ನು ಅಗಲಿದ್ದಾರೆ.

5 ದಿನದ ಹಿಂದೆ ಪತ್ನಿಯೂ ನಿಧನ
ಜಯಪ್ರಕಾಶ್ ಅವರ ಪತ್ನಿ, ಮಂಡಲ ಪಂಚಾಯತ್ ಮಾಜಿ ಸದಸ್ಯೆ ಉಷಾ(68ವ.)ಅವರು ಜೂ.1ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಇವರು ಅನಾರೋಗ್ಯದಿಂದ ಬಳಲುತ್ತಿದ್ದು ಮಂಗಳೂರಿನ ಎ.ಜೆ.ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಸುಬ್ರಹ್ಮಣ್ಯದ ಮಗಳ ಮನೆಗೆ ಬಂದಿದ್ದರು. ಅಲ್ಲಿ ಅವರಿಗೆ ಜೂ.1ರಂದು ಎದೆನೋವು ಕಾಣಿಸಿಕೊಂಡಿದ್ದು ಕಡಬ ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here