ಪುತ್ತೂರು: ಪುತ್ತೂರು ಇತಿಹಾಸ ಪ್ರಸಿದ್ಧ ಪುತ್ತೂರು ಮಹೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಶ್ರೀನಿವಾಸ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ಹಿಂದೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ಅವರು ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪೂರ್ಣಕಾಲಿಕ ಕಾರ್ಯನಿರ್ವಾಹಣಾಧಿಕಾರಿಯಗಿ ಶ್ರೀನಿವಾಸ್ ಅವರು ಕರ್ತವ್ಯ ನಿರ್ವಹಿಸಲಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ಕ್ಷೇತ್ರದಿಂದ ಪದೊನ್ನತಿ ಹೊಂದಿದ ಶ್ರೀನಿವಾಸ್ ಅವರು ಜನವರಿಯಿಂದ ಬೆಂಗಳೂರಿನಲ್ಲಿದ್ದು ಅಲ್ಲಿಂದ ಚುನಾವಣೆ ಪೂರ್ವ ಅವರಿಗೆ ಪುತ್ತೂರು ದೇವಳಕ್ಕೆ ವರ್ಗಾವಣೆ ಆದೇಶ ಬಂದಿತ್ತಾದರೂ ಚುನಾವಣೆ ಕರ್ತವ್ಯದ ಹಿನ್ನೆಲೆಯಿಂದ ಅವರು ವರ್ಗಾವಣೆಗೊಂಡಿರಲಿಲ್ಲ. ಇದೀಗ ಅವರು ಅವರು ವರ್ಗಾವಣೆಗೊಂಡು ಜೂ.5ರಂದು ಅವರು ಅಧಿಕಾರ ಸ್ವೀಕರಿಸಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸತ್ಯಧರ್ಮ ನಡೆಯಲ್ಲಿ ಅವರಿಗೆ ಶಾಲು ಹೊದೆಸಿ, ಪ್ರಸಾದ ನೀಡಿ ಗೌರವಿಸಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಿ ಐತ್ತಪ್ಪ ನಾಯ್ಕ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ದತ್ತಪೀಠದಲ್ಲಿದ್ದರು:
ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ಶ್ರೀನಿವಾಸ್ ಅವರು ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠ ಗುಹಾಂತರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿದ್ದರು. ಅದಕ್ಕೂ ಮೊದಲು ಹಾಸನ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅಲ್ಲಿಂದ ಅವರು ದಾವಣಗೆರೆ ಹರಪ್ಪನಹಳ್ಳಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ದತ್ತಪೀಠಕ್ಕೆ ವರ್ಗಾಣೆಗೊಂಡು ಪದೋನ್ನತಿ ಹೊಂದಿದ್ದರು.