ವಿದ್ಯುತ್ ದರ ಏರಿಕೆ ಖಂಡಿಸಿ ಬಂಟ್ವಾಳದಲ್ಲಿ ಬಿಜೆಪಿ ಪ್ರತಿಭಟನೆ

0

ಕಾಂಗ್ರೆಸ್ ಗ್ಯಾರಂಟಿ ರಾಜ್ಯವನ್ನು ಪಾಕಿಸ್ತಾನದ ಮಾದರಿ ಆರ್ಥಿಕ ದಿವಾಳಿತನಕ್ಕೆ ಕೊಂಡೊಯ್ಯುತ್ತದೆ-ಹರಿಕೃಷ್ಣ ಬಂಟ್ವಾಳ

ವಿಟ್ಲ: ವಿದ್ಯುತ್ ದರವನ್ನು ರಾಜ್ಯ ಸರಕಾರ ಹೆಚ್ಚಿಸಿರುವುದನ್ನು ಖಂಡಿಸಿ ಬಾರತೀಯ ಜನತಾ ಪಾರ್ಟಿಯ ಬಂಟ್ವಾಳ ಮಂಡಲ ವತಿಯಿಂದ ಪ್ರತಿಭಟನೆ ಬಿ.ಸಿ.ರೋಡ್ ನ -ಓವರ್ ಬಳಿ ಜೂ.5ರಂದು ಬೆಳಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ರವರ ಉಪಸ್ಥಿತಿಯಲ್ಲಿ ನಡೆಯಿತು.


ಕಿಯೋನಿಕ್ಸ್ ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ರವರು ಮಾತನಾಡಿ ಕಾಂಗ್ರೆಸ್ ತನ್ನ ಗ್ಯಾರಂಟಿ ಘೋಷಣೆ ಮೂಲಕ ಅಧಿಕಾರಕ್ಕೆ ಬಂದಿದ್ದು, ಇದು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿದೆ. ಇನ್ನು ಒಂದು ವರ್ಷದೊಳಗೆ ಕಾಂಗ್ರೆಸ್ ಪಕ್ಷವನ್ನೂ ಗ್ಯಾರಂಟಿ ದಿವಾಳಿ ಮಾಡುವುದರೊಂದಿಗೆ ರಾಜ್ಯವನ್ನು ಪಾಕಿಸ್ತಾನ್, ಮಾದರಿ ಆರ್ಥಿಕ ದಿವಾಳಿತನಕ್ಕೆ ಕೊಂಡೊಯ್ಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.


ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಪುತ್ತೂರು ಮಾತನಾಡಿ, ಪಂಚ ಗ್ಯಾರಂಟಿಗಳು ಅನುಷ್ಠಾನಕ್ಕೇ ಯೋಗ್ಯವಾದುದಲ್ಲ, ವಿದ್ಯುತ್ ಉಚಿತ ಎಂದು ಒಂದೆಡೆ ಹೇಳಿ, ಮತ್ತೊಂದೆಡೆಯಿಂದ ದರ ಏರಿಕೆ ಮಾಡುತ್ತಿದೆ. ನಿರುದ್ಯೋಗಿಗಳ ಭತ್ತೆಗೆ ಈಗ ಕಂಡೀಶನ್ ಹಾಕಲಾಗುತ್ತಿದೆ, ಸರಕಾರ ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದೆ ಎಂದರು.


ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದು, ಅಂದು ಹೇಳಿದ ಮಾತಿಗೆ ವ್ಯತಿರಿಕ್ತವಾಗಿ ಇಂದು ಷರತ್ತುಗಳನ್ನು ಹಾಕಲಾಗುತ್ತಿದೆ. ತಾನು ನೀಡಿದ ಆಶ್ವಾಸನೆಯನ್ನು ಮರೆಮಾಚುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಮಾಧವ ಮಾವೆ, ಸುಲೋಚನಾ ಜಿ.ಕೆ.ಭಟ್, ಕಮಲಾಕ್ಷಿ ಪೂಜಾರಿ, ರಮನಾಥ ರಾಯಿ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಡೊಂಬಯ ಅರಳ, ರವೀಶ್ ಶೆಟ್ಟಿ ಕರ್ಕಳ, ಸುರೇಶ್ ಕೋಟ್ಯಾನ್, ಗಣೇಶ್ ರೈ ಮಾಣಿ, ನಂದರಾಮ ರೈ, ಜಯರಾಮ ನಾಯ್ಕ್ ಕುಂಟ್ರಕಳ, ಪ್ರಕಾಶ್ ಅಂಚನ್, ಕೇಶವ ದೈಪಲ್, ಯಶೋಧರ ಕರ್ಬೆಟ್ಟು, ಧನಂಜಯ ಶೆಟ್ಟಿ ಸರಪಾಡಿ, ಪ್ರಭಾಕರ ಪ್ರಭು, ರಾಜಾರಾಮ ನಾಯಕ್, ದಿನೇಶ್ ದಂಬೆದಾರ್, ಹರಿಪ್ರಸಾದ್ ಸಹಿತ ಬಿಜೆಪಿಯ ಪ್ರಮುಖ ಪದಾಽಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here