ಬೆಳ್ಳಾರೆಯಲ್ಲಿ ನೂತನ ಶಾಖೆ ಶೀಘ್ರದಲ್ಲಿ ಆರಂಭ – ಚಿದಾನಂದ ಬೈಲಾಡಿ
ಪುತ್ತೂರು: ಪುತ್ತೂರುನಲ್ಲಿ ಪ್ರಧಾನ ಕಚೇರಿಯೊಂದಿಗೆ ಪುತ್ತೂರು ಮತ್ತು ಕಡಬ ಸೇರಿ 8 ಶಾಖೆಗಳನ್ನು ಹೊಂದಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ 9ನೇ ಶಾಖೆ ಅತಿ ಶೀಘ್ರದಲ್ಲಿ ಬೆಳ್ಳಾರೆಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಹೇಳಿದರು.
ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಸುದೀರ್ಘ 22 ವರ್ಷಗಳ ಸೇವೆಯೊಂದಿಗೆ ಸ್ವಂತ ಕಟ್ಟಡದಲ್ಲಿ 3 ವರ್ಷ ಪೂರೈಸಿ ಜೂ.5ರಂದು 4ನೇ ವರ್ಷಕ್ಕೆ ಪಾದಾರ್ಪಣೆ ಸಂದರ್ಭದಲ್ಲಿ ಬೆಳಿಗ್ಗೆ ಪ್ರಧಾನ ಕಚೇರಿ ಮತ್ತು ಎಪಿಎಂಸಿ ಶಾಖೆಯಲ್ಲಿ ನಡೆದ ಗಣಪತಿ ಹೋಮ, ಲಕ್ಷ್ಮೀಪೂಜೆ ಬಳಿಕ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು. ಈಗಾಗಲೇ ಪುತ್ತೂರು ಎಪಿಎಂಸಿ, ಕಡಬ, ಉಪ್ಪಿನಂಗಡಿ, ಕುಂಬ್ರ, ಆಲಂಕಾರು, ಕಾಣಿಯೂರು, ಶ್ರೀ ಮಹಾಲಿಂಗೇಶ್ವರ ಕಟ್ಟಡದಲ್ಲಿರುವ ಶಾಖೆ, ನೆಲ್ಯಾಡಿ ಶಾಖೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದರೊಂದಿಗೆ ಮುಂದೆ ಬೆಳ್ಳಾರೆಯಲ್ಲೂ ಅತಿ ಶೀಘ್ರದಲ್ಲಿ ಶಾಖೆ ಅರಂಭಿಸಲಾಗುವುದು ಎಂದು ಅವರು ಹೇಳಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಶುಭ ಹಾರೈಸಿದರು. ಆಡಳಿತ ಮಂಡಳಿ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಪ್ರವೀಣ್ ಕುಂಟ್ಯಾನ, ಲೋಕೇಶ್, ಸುದರ್ಶನ ಗೌಡ ಕೆ, ಸಂಜೀವ ಗೌಡ ಕೆ, ಸತೀಶ್ ಪಾಂಬಾರು, ತೇಜಸ್ವಿನಿ ಶೇಖರ್ ಗೌಡ, ಸಲಹಾ ಸಮಿತಿ ಸದಸ್ಯರಾದ ಶ್ರೀಧರ ಗೌಡ ಕಣಜಾಲು, ಲಿಂಗಪ್ಪ ಗೌಡ ತೆಂಕಿಲ, ಸುಂದರ ಗೌಡ ನಡುಬೈಲು, ವಾರಿಜಾಬೆಳಿಯಪ್ಪ ಗೌಡ, ಸಂಧ್ಯಾಶಶಿಧರ್, ರವಿ ಮುಂಗ್ಲಿಮನೆ, ಸುರೇಶ್ ಗೌಡ ಕಲ್ಲಾರೆ, ಸೋಮಪ್ಪ ಗೌಡ, ಸೋಮಪ್ಪ ಗೌಡ ಬಡಾವು, ಸೀತಾರಾಮ ಗೌಡ ಪೆರಿಯತ್ತೋಡಿ, ಮೀನಾಕ್ಷಿ ಡಿ ಗೌಡ, ಬಾಬು ಗೌಡ ಭಂಡಾರದ ಮನೆ, ಮಾಜಿ ನಿರ್ದೇಶಕರಾದ ಶಿವರಾಮ ಗೌಡ ಇದ್ಯಪೆ, ಸಾವಿತ್ರಿ ಕೆ., ನಾರಾಯಣ ಗೌಡ ಆರ್ವಾರ, ಸಂಸ್ಥೆಯ ಮೌಲ್ಯಮಾಪಕ ಅನಿಲ್, ಸರಾಫರಾದ ಕೇಶವ ಆಚಾರ್ಯ, ಸಂಘದ ಪ್ರಮುಖರಾದ ನಾಗಪ್ಪ ಗೌಡ ಬೊಮ್ಮೆಟ್ಟಿ, ಶಿವರಾಮ ಯಚ್.ಡಿ., ಪ್ರೇಮಾನಂದ್, ನಾರಾಯಣ ಗೌಡ, ಕೆ.ಪದ್ಮಯ್ಯ ಗೌಡ, ಬಾಬು ಗೌಡ ಕಲ್ಲೇಗ, ಕಾನೂನು ಸಲಹೆಗಾರ ಜಯಪ್ರಕಾಶ್, ಪುಟ್ಟಣ್ಣ, ಗಿರಿಜ, ಧರ್ಣಪ್ಪ ಗೌಡ ಕೆ, ಜಯರಾಮ ಗೌಡ, ಆನಂದ ಗೌಡ ಮಳುವೇಲು, ರಾಧಾಕೃಷ್ಣ ಗೌಡ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ, ಐಸಿಐಸಿಐ ಬ್ಯಾಂಕ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಶಾಖಾ ಮ್ಯಾನೇಜರ್ ತೇಜಸ್ವಿನಿ, ಸಿಬ್ಬಂದಿಗಳಾದ ನಿಶ್ಚಿತಾ ಯು.ಡಿ., ರಕ್ಷಿತ್, ಯಶ್ಚಿತ್, ಪಿಗ್ಮಿ ಸಂಗ್ರಾಹಕರಾದ ಮೋಹನ್ ಗೌಡ, ನವೀನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.