ಆಲಂಕಾರು : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಆಲಂಕಾರು ಬಿಲ್ಲವ ಗ್ರಾಮ ಸಮಿತಿ ಹಾಗು ಬಿಲ್ಲವ ಮಹಿಳಾ ವೇದಿಕೆ ಆಲಂಕಾರು ಇದರ ವಾರ್ಷಿಕ ಮಹಾಸಭೆ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಪದ್ಮನಿಲಯ ಆಲಂಕಾರಿನಲ್ಲಿ ನಡೆಯಿತು.
ಆಲಂಕಾರು ಗ್ರಾಮ ಸಮಿತಿಯ ಅಧ್ಯಕ್ಷ ಲಿಂಗಪ್ಪ ಪೂಜಾರಿ ಕೇಪುಳು ಹೊಸಮನೆ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು .ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ(ರಿ)ಪುತ್ತೂರು ಇದರ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ 50 ಮಂದಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿ.ತಾಲೂಕಿನಲ್ಲಿ 51 ಗ್ರಾಮ ಸಮಿತಿಗಳಿದ್ದು ಆಲಂಕಾರು ಬಿಲ್ಲವ ಗ್ರಾಮ ಸಮಿತಿ ಬೆಳ್ಳಿ ಹಬ್ಬ ಆಚರಿಸಿ ಯಶಸ್ವಿ ಬಿಲ್ಲವ ಸಂಘ ಆಗಿದ್ದು ತಾಲೂಕಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು.
ಬಿಲ್ಲವ ಸಂಘ ಪುತ್ತೂರು ಇದರ ಕಾರ್ಯದರ್ಶಿ ಚಿದಾನಂದ ಸುವರ್ಣ ಗೆಣಸಿನ ಕುಮೇರು, ಕೋಶಾಧಿಕಾರಿ ಬಿ. ಟಿ ಮಹೇಶ್ಚಂದ್ರ ಸಾಲ್ಯಾನ್ ನಡುಬೈಲುಗುತ್ತು , ಆಲಂಕಾರು ಮೂರ್ತೆದಾರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಮುತ್ತಪ್ಪ ಪೂಜಾರಿ ನೈಯ್ಯಲ್ಗ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಅಧ್ಯಕ್ಷೆ ಚಂದ್ರಕಲಾ ಮುಕ್ವೆ , ಪುತ್ತೂರು ಗುರುಮಂದಿರದ ಕಾರ್ಯನಿರ್ವಹಣಾಧಿಕಾರಿ ಹೊನ್ನಪ್ಪ ಪೂಜಾರಿ ಕೈಂದಾಡಿ, ಪುತ್ತೂರು ಗುರುಮಂದಿರ ಸಮಿತಿ ಸದಸ್ಯ ಸದಾನಂದ ಕುಮಾರ್ ಮಡ್ಯೋಟ್ಟು, ಆಲಂಕಾರು ವಲಯ ಸಂಚಾಲಕ ಉದಯ ಸಾಲ್ಯಾನ್ ಮಾಯಿಲ್ಗ, ಕೋಟಿ ಚೆನ್ನಯ್ಯ ಮಿತ್ರವೃಂದ (ರಿ) ಆಲಂಕಾರು ಇದರ ಅಧ್ಯಕ್ಷರಾದ ಜಯಂತ ಪೂಜಾರಿ ನೆಕ್ಕಿಲಾಡಿ ಶುಭಾ ಹಾರೈಸಿದರು.
ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು . 2023 ರಿಂದ -2025 ನೇ ಸಾಲಿನವರೆಗೆ ನೂತನ ಅಧ್ಯಕ್ಷರಾಗಿ ದಿನೇಶ್ ಕೇಪುಳು , ಉಪಾದ್ಯಕ್ಷರಾಗಿ ಚಂದ್ರಶೇಖರ ಪಟ್ಟೆಮಜಲು,ಗೀತೇಶ್ ಕುಂಞಲಡ್ಡ, ಕಾರ್ಯದರ್ಶಿ ಜಯಂತ ನೆಕ್ಕಿಲಾಡಿ ಕೆಳಗಿನಮನೆ, ಜೊತೆಕಾರ್ಯದರ್ಶಿ ಯೋಗೀಶ್ ನೆಕ್ಕಿಲಾಡಿ ,ಕೋಶಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ವಿನುತಾ ಉಮೇಶ್ , ಕಾರ್ಯದರ್ಶಿ ಪ್ರಮೀಳಾ ಜಯಂತ್ ನೆಕ್ಕಿಲಾಡಿ ಯವರನ್ನು ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಇದೇ ಸಂಧರ್ಭದಲ್ಲಿ ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ ನಾರಾಯಣ ಗುರುಸ್ವಾಮಿಯವರ ಜೀವನ ಚರಿತ್ರೆಯ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.ಸಭೆಯಲ್ಲಿ ಆಲಂಕಾರು ಬಿಲ್ಲವ ಸಂಘದ ಸ್ಥಾಪಕಧ್ಯಕ್ಷರು ಹಾಗು ಮೂರ್ತೆದಾರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಹಾಗು ಪ್ರಸಕ್ತ ನಿರ್ದೇಶಕರಾಗಿದ್ದ ದಿ!. ಚಂದ್ರಶೇಖರ .ಕೆ ಯವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ತಿಮ್ಮಪ್ಪ ಪೂಜಾರಿ ಕಿನ್ನಿಗೋಳಿ ಪ್ರಾರ್ಥಿಸಿ, ಸದಾನಂದ ಮಡ್ಯೋಟ್ಟು ಸ್ವಾಗತಿಸಿ ,ಗೀತೇಶ್ ಕಾರ್ಯಕ್ರಮ ನಿರೂಪಿಸಿ . ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.ದಯಾನಂದ ಕರ್ಕೇರಾ ವಂದಿಸಿದರು.