ನಿಡ್ಪಳ್ಳಿ: ದ.ಕ.ಜಿ.ಪಂ.ಉನ್ನತ ಹಿರಿಯ ಪ್ರಾಥಮಿಕ ಶಾಲೆ ದರ್ಬೆತ್ತಡ್ಕ ಇಲ್ಲಿನ 2023-24 ನೇ ಸಾಲಿನ ಶಾಲಾ ಮಂತ್ರಿಮಂಡಲದ ನಾಯಕನಾಗಿ 8ನೇ ತರಗತಿಯ ವಿದ್ಯಾರ್ಥಿ ನವೀತ್ ಕುಮಾರ್ ಹಾಗೂ ಉಪ ನಾಯಕನಾಗಿ 8ನೇ ತರಗತಿ ವಿದ್ಯಾರ್ಥಿ ರತನ್ ಎಲ್ ಕೆ ಚುನಾವಣೆ ನಡೆಸುವ ಮೂಲಕ ಆಯ್ಕೆಯಾಗಿದ್ದಾರೆ.
ಗೃಹ ಹಾಗೂ ರಕ್ಷಣಾ ಮಂತ್ರಿಯಾಗಿ ರತನ್ ಎಲ್ ಕೆ, ಉಪ ಗೃಹ ಹಾಗೂ ಉಪ ರಕ್ಷಣಾಮಂತ್ರಿಯಾಗಿ ಜೀವನ್, ಶಿಸ್ತು ಮಂತ್ರಿಯಾಗಿ ನವೀತ್ ಕುಮಾರ್ , ಉಪ ಶಿಸ್ತು ಮಂತ್ರಿಯಾಗಿ ಸಾತ್ವಿ ಡಿ, ಶಿಕ್ಷಣ ಹಾಗೂ ಗ್ರಂಥಾಲಯ ಮಂತ್ರಿಯಾಗಿ ಲತಾಶ್ರೀ ಡಿ, ಉಪ ಶಿಕ್ಷಣ ಹಾಗೂ ಉಪ ಗ್ರಂಥಾಲಯ ಮಂತ್ರಿಯಾಗಿ ಗುಣಶ್ರೀ, ಸ್ವಚ್ಛತಾ ಮಂತ್ರಿಯಾಗಿ ಹಿತೇಶ್, ಉಪ ಸ್ವಚ್ಛತಾ ಮಂತ್ರಿಯಾಗಿ ಯಕ್ಷಿತ್, ನೀರಾವರಿ ಮಂತ್ರಿಯಾಗಿ ಪ್ರಮೋದ್ ಕುಮಾರ್, ಉಪ ನೀರಾವರಿ ಮಂತ್ರಿಯಾಗಿ ಧನ್ವಿತ್ ಕೆ, ಕ್ರೀಡಾ ಮಂತ್ರಿಯಾಗಿ ಅಶ್ವಿತಾ, ಉಪ ಕ್ರೀಡಾ ಮಂತ್ರಿಯಾಗಿ ಪುರುಷೋತ್ತಮ, ಆಹಾರ ಮಂತ್ರಿಯಾಗಿ ಸುಜಿತ್, ಉಪ ಆಹಾರಮಂತ್ರಿಯಾಗಿ ವಿನುತ್ ,ಆರೋಗ್ಯಮಂತ್ರಿಯಾಗಿ ಸ್ಪಂದನ ಡಿ ,ಉಪ ಆರೋಗ್ಯಮಂತ್ರಿಯಾಗಿ ಚಿಂತನ್ ಎಂ ಆರ್, ಸಾಂಸ್ಕೃತಿಕ ಮಂತ್ರಿಯಾಗಿ ಮೋಕ್ಷಿತ, ಉಪ ಸಾಂಸ್ಕ್ರತಿಕ ಮಂತ್ರಿಯಾಗಿ ಸ್ಮೃತಿ ಕೆ, ಕೃಷಿ ಮಂತ್ರಿಯಾಗಿ ಎಸ್.ವಿನ್ಯಾಸ್, ಉಪ ಕೃಷಿಮಂತ್ರಿಯಾಗಿ ರೋಶಿತ್, ವಿರೋಧ ಪಕ್ಷದ ನಾಯಕನಾಗಿ ಪ್ರಕಾಶ್ , ವಿರೋಧ ಪಕ್ಷದ ಉಪ ನಾಯಕಿಯಾಗಿ ಲಾಸ್ಯ ಆಯ್ಕೆಯಾಗಿದ್ದಾರೆ. ಶಾಲಾ ಚುನಾವಣೆ ಮೂಲಕ ಆಯ್ಕೆಯಾದ ಮಂತ್ರಿ ಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸೀತಾರಾಮ ಗೌಡ ಎಂ ಪ್ರಮಾಣ ವಚನ ಬೋಧಿಸಿದರು. ಶಾಲಾ ಮಂತ್ರಿ ಮಂಡಲದ ಚುನಾವಣೆಯು ಪ್ರಭಾರ ಮುಖ್ಯಗುರುಗಳಾದ ಶೋಭಾ ಕುಮಾರಿ ಇವರ ಮಾರ್ಗದರ್ಶನದಲ್ಲಿ ನಡೆಯಿತು ಪದವೀದರ ಸಹ ಶಿಕ್ಷಕರಾದ ರಾಜು ಎಸ್ ಟಿ ಹಾಗೂ ಅತಿಥಿ ಶಿಕ್ಷಕಿ ಯೋಗಿನಿ ಆರ್ ಸಹಕರಿಸಿದರು.