ಪುತ್ತೂರು;ಆರ್ಯಾಪು ಗ್ರಾಮದ ಹಂಟ್ಯಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ 2023-24 ನೇ ಸಾಲಿನ ಮಂತ್ರಿ ಮಂಡಲದ ಚುನಾವಣೆಯನ್ನು ಜೂ.3ರಂದು ಇವಿಎಮ್ ಆಪ್ ಎಲೆಕ್ಟ್ರೋನಿಕ್ಸ್ ತಂತ್ರಜ್ಞಾನದ ಮೂಲಕ ನಡೆಸಲಾಯಿತು.
ಶಾಲಾ ನಾಯಕನಾಗಿ 8ನೇ ತರಗತಿಯ ಅಬ್ದುಲ್ ಅನೀಸ್, ಶಾಲಾ ಉಪ ನಾಯಕನಾಗಿ 7 ನೇ ತರಗತಿಯ ವರುಣ್, ಗೃಹ,ರಕ್ಷಣಾ ಮಂತ್ರಿಯಾಗಿ 8ನೇ ತರಗತಿಯ ಭುವನ್, ಎಂ. ಜಯಂತ್ ಕುಮಾರ್, ಗೌತಮ್, ಮನ್ವಿತ್, ಫಾತಿಮತ್ ನಶ್ರೀಯ, ಕೃಷಿ,ನೀರಾವರಿ ಮಂತ್ರಿಯಾಗಿ 8ನೇ ತರಗತಿಯ ಗೌತಮ್, ಜಯಂತ್, ವಾರ್ತಾ,ವಿದ್ಯಾಮಂತ್ರಿಯಾಗಿ 8ನೇ ತರಗತಿಯ ಫಾತಿಮತ್ ನಶ್ರೀಯ, ಫಾತಿಮತ್ ಮುಝೈನಾ, 7ನೇ ತರಗತಿಯ ದೀಕ್ಷಾ, ಹಂಸಿತಾ, ಸಾಂಸ್ಕೃತಿಕ ಮಂತ್ರಿಯಾಗಿ 7ನೇ ತರಗತಿಯ ತನುಶ್ರೀ, 6ನೇ ತರಗತಿಯ ಧನ್ಯಶ್ರೀ, ಆಹಾರ ಮಂತ್ರಿಯಾಗಿ ೮ನೇ ತರಗತಿಯ ಹರ್ಷ ಸಾಲಿಯಾನ್, 7ನೇ ತರಗತಿಯ ಮಹಮ್ಮದ್ ಮನ್ಸೂರ್, ಕ್ರೀಡಾ ಮಂತ್ರಿಯಾಗಿ 8ನೇ ತರಗತಿಯ ಫಾತಿಮತ್ ಮುಝೈನಾ, ಫಾತಿಮತ್ ನಶ್ರೀಯಾ, ಆರೋಗ್ಯ- ಶುಚಿತ್ವ- ಶಿಸ್ತು ಮಂತ್ರಿಯಾಗಿ 8ನೇ ತರಗತಿಯ ಝಿಯಾನ್, 7ನೇ ತರಗತಿಯ ದೀಕ್ಷಾ, 6ನೇ ತರಗತಿಯ ಪೂಜಾಶ್ರೀ, ಲಾವಣ್ಯ ಆಯ್ಕೆಯಾದರು. ಪ್ರಭಾರ ಮುಖ್ಯಗುರು ಮೋಹಿನಿ, ಶಿಕ್ಷಕರಾದ ವತ್ಸಲಾ ಬಿ, ವಿದ್ಯಾ ಕೆ, ಸಾವಿತ್ರಿ ಎನ್ ಚುನಾವಣೆಯನ್ನು ನಡೆಸಿಕೊಟ್ಟರು.