ಪುತ್ತೂರು: ರಾಜೀವಗಾಂಧಿ ವಿಶ್ವವಿದ್ಯಾನಿಲಯ ನಡೆಸಿದ ಮೊದಲ ವರ್ಷದ ಕ್ರಿಯಾ ಶಾರೀರ ಎಮ್. ಡಿ. ಪರೀಕ್ಷೆಯಲ್ಲಿ ಡಾ.ಸೌರಭ 76 ಶೇಕಡಾ ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ. ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿರುವ ಇವರು ಪುತ್ತೂರಿನ ಶಾಂತಾ ಕುಂಟಿನಿ ಹಾಗೂ ರವಿ ಕುಂಟಿನಿ ಅವರ ಪುತ್ರಿಯಾಗಿದ್ದು, ಮಂಗಳೂರಿನ ಕೆನರಾ ಪ್ರೌಢಶಾಲೆಯ ಸಂಸ್ಕ್ರತ ಅಧ್ಯಾಪಕ ಜಯರಾಮ ಉಳುವಾನರವರ
ಪತ್ನಿಯಾಗಿದ್ದಾರೆ.