ಪುತ್ತೂರು : ಪ್ರಜಾ ಪ್ರಭುತ್ವವನ್ನು ಉಳಿಸಿಕೊಂಡು ಉತ್ತಮ ದೇಶಕಟ್ಟುವ ಜವಾಬ್ದಾರಿ ಪ್ರತಿಯೊಬ್ಬನದ್ದು. ತಮ್ಮ ಅಮೂಲ್ಯ ಮತವನ್ನು ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಗೂ ಇದೆ. ವಿದ್ಯಾವಂತರು ಈ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ಉತ್ತಮ ರಾಜಕಾರಣಿಗಳು, ಎಂ.ಎಲ್.ಎ.ಗಳು, ಎಂ.ಪಿ.ಗಳು, ಜನನಾಯಕರನ್ನು ನಿರ್ಮಾಣ ಮಾಡುವುದು ವಿದ್ಯಾಲಯಗಳ ಮಹತ್ತರ ಜವಾಬ್ದಾರಿ. ಜನಸೇವೆ, ಸಮಾಜಸೇವೆ, ಮತದಾನದ ಮಹತ್ವವನ್ನು ವಿದ್ಯಾರ್ಥಿಗಳಾಗಿರುವಾಗಲೇ ತಿಳಿದುಕೊಂಡಿರಬೇಕು ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜರು ಹೇಳಿದರು.
ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿ ಸಂಘದ ಚುನಾವಣೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಶೈನಿ ಕೆ ಜೆ ಕಾರ್ಯಕ್ರಮ ನಿರೂಪಿಸಿದರು. ಅಭ್ಯರ್ಥಿಗಳು ತಮ್ಮನ್ನು ಪರಿಚಯಿಸಿ ಮತಯಾಚಿಸಿದರು.
ಉಪನ್ಯಾಸಕರಾದ ಪ್ರದೀಪ್ ಕೆ ವೈ ಮತ್ತು ಶೈನಿ ಕೆ ಜೆ ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಉಪನ್ಯಾಸಕರು ಸಹಕರಿಸಿದರು.
ವಿಜೇತ ಅಭ್ಯರ್ಥಿಗಳು:
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿಯ ನಿಶಾಂತ್ ಬಿ ಎಮ್ ಹಾಗೂ ಉಪಾಧ್ಯಕ್ಷರಾಗಿ ದ್ವಿತೀಯ ಪಿಯುಸಿಯ ಸಮೃದ್ಧಿ ಎಸ್ ರೈ ಆಯ್ಕೆಯಾದರು. ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ಶಮನ್ ಕೃಷ್ಣ ಕೆ, ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿಯ ವಿಕೇಶ್ ಪ್ರಭು ಆಯ್ಕೆಯಾದರು. ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಸಮೃದ್ಧಿ ಶೆಟ್ಟಿ ಬಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಅದಿತಿ ನಾಯಕ್ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ದ್ವಿತೀಯ ಪಿಯುಸಿಯ ಶ್ರೀಮಾನ್ ಘಾಟೆ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಚಿಂತನ್ ಎಂ ಶೆಟ್ಟಿ ಆಯ್ಕೆಯಾದರು. ಶಿಸ್ತುಮಂತ್ರಿಯಾಗಿ ದ್ವಿತೀಯ ಪಿಯುಸಿಯ ತನ್ಮಯಿ ಡಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ಇಶಾನ್ ಎಸ್ ಭಟ್ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಹರ್ಷಿತಾ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ವರ್ಷಿಣಿ ಆಳ್ವ ಆಯ್ಕೆಯಾದರು. ಸಾಂಸ್ಕೃತಿಕ ಮಂತ್ರಿಯಾಗಿ ದ್ವಿತೀಯ ಪಿಯುಸಿಯ ಅನುಪಮಾ ಸಿ, ಉಪಮಂತ್ರಿಯಾಗಿ ಪ್ರಥಮ ಪಿಯುಸಿಯ ವಿಕಾಸ್ ಬಿ ಆಯ್ಕೆಯಾದರು.