ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ರಚನೆ

0

ಪುತ್ತೂರು: ವಿವೇಕಾನಂದ ಪದವಿ ಪೂರ್ವಕಾಲೇಜಿನಲ್ಲಿ 2023-24ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮತದಾನದ ಮೂಲಕ ನಡೆಯಿತು.

ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಮನೀಶ್ ಪಿ ಎಚ್‌ ಆಯ್ಕೆಯಾದರು. ಈತನು ಆರ್ಯಾಪು ಗ್ರಾಮದ ಹರೀಶ್ ಜಿ ಸಿ ಮತ್ತು ಗೀತಾ ಎಚ್‌ರವರ ಪುತ್ರ.ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಸಹನಾ ಆಯ್ಕೆಯಾದರು. ಈಕೆ ಕೆಳ್ಳಪುತ್ತಿಗೆ ಸುರೇಶ್ ಭಟ್ ಮತ್ತು ಉಷಾ ಇವರ ಪುತ್ರಿ.

ಜತೆ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಅನಿಕ ರಶ್ಮಿ ಕೃಷ್ಣ (ದರ್ಬೆ ಅರುಣ್‌ ಕೃಷ್ಣ ಮತ್ತು ರುಚಿತಾ ಕೃಷ್ಣ ರವರ ಪುತ್ರಿ)ಆಯ್ಕೆಯಾದರು.
ಕ್ರೀಡಾ ಸಂಘದ ಕಾರ್ಯದರ್ಶಿಯಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್‌ ರಾಜ್ ಹೆಗ್ಡೆ(ಕಬಕದ ಬಿ ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ರವರ ಪುತ್ರ) ಹಾಗೂ ಕ್ರೀಡಾ ಜತೆ ಕಾರ್ಯದರ್ಶಿ ಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಭೂಮಿಕಾ (ನೀರ್ಕಾಜೆ ನಿರಂಜನ ಕೆ ಮತ್ತು ಸುನಂದಾ ಎಂ ರವರ ಪುತ್ರಿ)ರವರನ್ನು ನೇಮಕ ಮಾಡಲಾಯಿತು.


ಇದೆ ವೇಳೆ ಕಾಲೇಜಿನ ವಿವಿಧ ಸಂಘಗಳಿಗೆ ಪದಾಧಿಕಾರಿಗಳ ನೇಮಕ ಮಾಡಲಾಯಿತು. ವಿಜ್ಞಾನ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕೃತಿ ಪಿ ಮತ್ತು ಕಾರ್ಯದರ್ಶಿಯಾಗಿ ಯಶ್ಮಿತಾ ಬಿ ಕೆ, ವಾಣಿಜ್ಯ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಚಿತ್ರಶ್ರೀ ಮತ್ತು ಕಾರ್ಯದರ್ಶಿಯಾಗಿ ಸಂಸ್ಕೃತಿ ಜೈನ್, ಕಲಾ ಸಂಘದ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದ ಹರ್ಷಿತ ಮತ್ತು ಕಾರ್ಯದರ್ಶಿಯಾಗಿ ಸುಜಿತ್‌ ಯಾದವ್, ಇಕೋ ಕ್ಲಬ್‌ನ ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿಖ್ಯಾತ್ ಮತ್ತು ಕಾರ್ಯದರ್ಶಿಯಾಗಿ ಯಶವಂತ್‌ಗೌಡ , ಲಲಿತಾ ಕಲಾ ಸಂಘದ ಅಧ್ಯಕ್ಷರಾಗಿ ಪಲ್ಲವಿ ಡಿ ಭಟ್ ಮತ್ತು ಕಾರ್ಯದರ್ಶಿಯಾಗಿ ಪರೀಕ್ಷಿತ್ ನೇಮಕವಾದರು.
ವಿದ್ಯಾರ್ಥಿ ಸಂಘದ ಮತ್ತುಕ್ರೀಡಾ ಸಂಘದ ಚುನಾವಣೆಯು ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರರವರ ಮಾರ್ಗದರ್ಶನದಲ್ಲಿ ನಡೆಯಿತು. ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ದೇವಿಪ್ರಸಾದ್, ಶ್ರೀಧರ್ ಶೆಟ್ಟಿಗಾರ್, ವಿಶ್ವನಾಥ್ ಕೆ, ದಯಮಣಿ ಟಿ ಕೆ, ಶೈಲಜಾರೈ, ಕುಮಾರಿ ಪಿ ಸಿ, ಶರ್ಮಿಳಾ ಕೆ ಎಂ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಜ್ಯೋತಿ, ಯತೀಶ್‌ಕುಮಾರ್ ಹಾಗೂ ಇತರರು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಿದರು.ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಮತ್ತು ಉಪನ್ಯಾಸಕರು ವಿದ್ಯಾರ್ಥಿ ಸಂಘದ ನಾಯಕರನ್ನು ಅಭಿನಂದಿಸಿದರು.

LEAVE A REPLY

Please enter your comment!
Please enter your name here