ಪುತ್ತೂರು: ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತೇಜಚಿನ್ಮಯ ಹೊಳ್ಳ 2023 ನೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 621 (625 ರಲ್ಲಿ) ಅಂಕಗಳನ್ನು ಗಳಿಸಿರುತ್ತಾನೆ.
ಕಳೆದ ಜನವರಿ ತಿಂಗಳಲ್ಲಿ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸಿದ್ದ ಪರೀಕ್ಷಾಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಮ್ಮೆ ಇವರದು. ಕಳೆದ ಡಿಸೆಂಬರ್ ತಿಂಗಳಲ್ಲಿ ಒರಿಸ್ಸಾದ ಭುವನೇಶ್ವರದಲ್ಲಿ ನಡೆದ ಕಲೋತ್ಸವ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನಿಯಾಗಿ ಕಂಚಿನ ಪದಕ ಪಡೆದಿದ್ದಾರೆ. ತೇಜ ಚಿನ್ಮಯ ಪುತ್ತೂರಿನ ಹೆಸರಾಂತ ಸಂಗೀತ ವಿದುಷಿ ಡಾ. ಸುಚಿತ್ರಾ ಹೊಳ್ಳ ಹಾಗೂ ಹರೀಶ್ ಹೊಳ್ಳ ದಂಪತಿಯ ಪುತ್ರ. ಮರು ಮೌಲ್ಯಮಾಪನದ ಬಳಿಕ 621 ಅಂಕಗಳನ್ನು ಗಳಿಸಿದ ತೇಜ ಚಿನ್ಮಯ ರಾಜ್ಯಕ್ಕೆ ಐದನೇ ರ್ಯಾಂಕನ್ನು ಪಡೆದಿದ್ದಾರೆ.