ನೆಲ್ಯಾಡಿ: ಸರಕಾರಿ ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ-ಇಚಿಲಂಪಾಡಿಯಲ್ಲಿ ಶಾಲಾ ಮಂತ್ರಿಮಂಡಲವನ್ನು ಮತದಾನದ ಮೂಲಕ ರಚಿಸಲಾಯಿತು.
ಮುಖ್ಯಮಂತ್ರಿಯಾಗಿ ಸಾನ್ವಿ ಎಸ್.ಎಂ., ಹಾಗೂ ಉಪಮುಖ್ಯಮಂತ್ರಿಯಾಗಿ ಶ್ರೇಯಸ್ ಎ.ಬಿ.ಆಯ್ಕೆಯಾದರು. ಗೃಹ ಮಂತ್ರಿಯಾಗಿ ಧನುಷಾ, ಡಾಲ್ವಿ, ಸಹಾಯಕ ಮಂತ್ರಿಗಳಾಗಿ ನೀರಜ್, ಗೌತಮ್ ಪೂಜಾರಿ, ಶಿಕ್ಷಣ ಮಂತ್ರಿಗಳಾಗಿ ಕಾವ್ಯಶ್ರೀ, ಪೂರ್ವಿ, ಯೋಗಿತಾ, ಭವಿಷ್, ಆರೋಗ್ಯ ಮಂತ್ರಿಗಳಾಗಿ ಯಶ್ಮಿತ, ಶ್ರಾವ್ಯ ಕೆ.ಎಸ್., ಸಾಂಸ್ಕೃತಿಕ ಮಂತ್ರಿಗಳಾಗಿ ಸಿಂಚನ, ಪ್ರೇಮಲತ, ವಾರ್ತಾ ಮಂತ್ರಿಗಳಾಗಿ ನಿಶಾ, ಶುಚಿತ್ವ ಮತ್ತು ಶಿಸ್ತುಮಂತ್ರಿಗಳಾಗಿ ಜಿತೇಶ್, ಪ್ರದ್ಯುಮ್, ವಿಷ್ಣುಪ್ರಸಾದ್, ಆಲನ್, ನೀರಾವರಿ ಮಂತ್ರಿಗಳಾಗಿ ಪ್ರೀತಮ್, ಪೂರ್ಣೇಶ್,ಪ್ರೀತಮ್, ಕೃಷಿ ಮಂತ್ರಿಗಳಾಗಿ ಅಗಸ್ಟಿನ್, ಭವಿತ್, ಪ್ರಿಯೋನಾ, ಹಿತಾ, ಕ್ರೀಡಾ ಮಂತ್ರಿಗಳಾಗಿ ರಂಜನ್, ಲಿಖಿತ್, ಗ್ರಂಥಾಲಯ ಮಂತ್ರಿಗಳಾಗಿ ಅನ್ವಿತ, ಪ್ರೇಮಲತ, ರೋಶಿನಿ ಆಯ್ಕೆಯಾಗಿದ್ದಾರೆ. ಶಾಲಾ ಮುಖ್ಯೋಪಾಧ್ಯಾಯನಿ ಜಯಶ್ರೀ ಎಸ್.ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಯಿತು.