ಉಪ್ಪಿನಂಗಡಿ ಮಾಂಡೋವಿ ಮೋಟಾರ್‍ಸ್‌ ನಿಂದ ಪುರುಷರಕಟ್ಟೆಯಲ್ಲಿ ಗ್ರಾಮೀಣ ಹಬ್ಬ

0

ಪುತ್ತೂರು: ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯಿಂದ ಜೂ.16, 17ರಂದು ಪುರುಷರಕಟ್ಟೆಯಲ್ಲಿ ಮೆಗಾ ಗ್ರಾಮೀಣ ಹಬ್ಬ ನಡೆಯಿತು. ನರಿಮೊಗರು ಗ್ರಾ.ಪಂ. ಅರಣ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೇದನಾಥ ಸುವರ್ಣ ಗ್ರಾಮೀಣ ಹಬ್ಬವನ್ನು ಉದ್ಘಾಟಿಸಿದರು. ನರಿಮೊಗರು ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕುಲಾಲ್, ಉದಯಭಾಗ್ಯ ಹೊಟೇಲ್ ಮಾಲಕ ದೇವಿಕಿರಣ್, ಉದಯಸ್ಟೋರ್‍ಸ್ ಮಾಲಕ ದೇವಿಪ್ರಸಾದ್, ಆಟೋಚಾಲಕ ಮಾಲಕ ಜಿನ್ನಪ್ಪ ನಾಯ್ಕ, ರಮೇಶ್ ಕೆದ್ಕಾರ್, ಅರುಣ್ ಉಪಸ್ಥಿತರಿದ್ದರು. ಸುಮಿತ್ ಎನ್. ಸ್ವಾಗತಿಸಿದರು. ಹರಿಕಿರಣ್ ರೈ ಎಸ್. ವಂದಿಸಿ ಸೀನಿಯರ್ ರಿಲೇಶನ್‌ಶಿಪ್ ಮ್ಯಾನೇಜರ್ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು.

ಮಾಂಡೋವಿ ಮೋಟಾರ್‍ಸ್‌ನ ರಾಜೇಶ್ ಎನ್.ಎಸ್. ಹೊಸ ಕಾರುಗಳ ಮಾಹಿತಿ ನೀಡಿದರು. ಮನೋಹರ್ ಎಂ., ಹಳೆಯ ಕಾರುಗಳ ವಿಭಾಗದ ನವೀನ್ ಕುಮಾರ್ ಉಪಸ್ಥಿತರಿದ್ದರು. ಗ್ರಾಮೀಣ ಹಬ್ಬದಲ್ಲಿ ಹೊಸ ಕಾರುಗಳ ಪ್ರದರ್ಶನ, ಹಳೆಯ ಕಾರು ಮೌಲ್ಯಮಾಪನ ಮತ್ತು ವಿವಿಧ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ವ್ಯವಸ್ಥೆ ಮಾಡಲಾಯಿತು.

LEAVE A REPLY

Please enter your comment!
Please enter your name here