ಪುತ್ತೂರು ಕಮ್ಯೂನಿಟಿ ಸೆಂಟರ್ ನ 10 ಮಂದಿಗೆ ಎಂಬಿಬಿಎಸ್ ಅರ್ಹತಾ ಅಂಕ

0

ಪುತ್ತೂರು/ಮಂಗಳೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ 10 ವಿದ್ಯಾರ್ಥಿಗಳಿಗೆ 2023ರ ನೀಟ್ ಪರೀಕ್ಷೆಯಲ್ಲಿ ಎಂಬಿಬಿಎಸ್‌ಗೆ ಅರ್ಹತಾ ಅಂಕ ದೊರಕಿದೆ. ಈ ಪೈಕಿ 6 ವಿದ್ಯಾರ್ಥಿಗಳು ಸೆಂಟರ್ ನ ನೊಂದಾಯಿತ ವಿದ್ಯಾರ್ಥಿಗಳಾಗಿದ್ದರೆ. ಉಳಿದ ನಾಲ್ಕು ವಿದ್ಯಾರ್ಥಿಗಳು ಸೆಂಟರ್ ನಲ್ಲಿ ಆಪ್ತಸಮಾಲೋಚನೆ ಮತ್ತು ಮಾನಿಟರಿಂಗ್ ವಿಭಾಗದಲ್ಲಿರುವ ವಿದ್ಯಾರ್ಥಿಗಳಾಗಿದ್ದಾರೆ.

ಕಮ್ಯುನಿಟಿ ಸೆಂಟರ್ ಕಳೆದ ಬಾರಿ ಒಟ್ಟು 65 ವಿದ್ಯಾರ್ಥಿಗಳನ್ನು ಶಾಹೀನ್ ಬೀದರ್‌, ಪಾಲ್ಕನ್ ಬೆಂಗಳೂರು, ಬೈಜೂಸ್ ಆಕಾಶ್, ಬ್ರಿಲಿಯಂಟ್ ಪಾಲ, ಎಕ್ಸೆಲ್, ಆಳ್ವಾಸ್ ಮುಂತಾದ ಪ್ರತಿಷ್ಠಿತ ನೀಟ್ ಕೋಚಿಂಗ್ ಸೆಂಟರ್ ಗೆ ವಿದ್ಯಾರ್ಥಿಗಳನ್ನು ದಾಖಲಿಸಿತ್ತು. ಈ ಪೈಕಿ 10 ವಿದ್ಯಾರ್ಥಿಗಳು ಎಂಬಿಎಂಬಿಎಸ್‌ಗೆ ಅರ್ಹತಾಂಕ ಪಡೆದರೆ ಉಳಿದ ವಿದ್ಯಾರ್ಥಿಗಳು ಬಿಡಿಎಸ್ ಮತ್ತು ಬಿಇಎಂಎಸ್ ಗೆ ಸೇರಲು ಅರ್ಹತೆ ಪಡೆದಿದ್ದಾರೆ.

LEAVE A REPLY

Please enter your comment!
Please enter your name here