ಅಂಬಿಕಾ ಸಂಸ್ಥೆಯಿಂದ ವಿವಿಧ ಕೋರ್ಸ್‌ಗಳಿಗೆ ಸಂಬಂಧಿಸಿ ಆನ್‌ಲೈನ್ ತರಗತಿಗಳು

0

ಸಿಎ, ಬ್ಯಾಂಕಿಂಗ್ ಹಾಗೂ ಸರ್ಕಾರಿ ಉದ್ಯೋಗಗಳಿಗೆ ನಿರಂತರ ತರಬೇತಿ
ಉದ್ಯೋಗಿಗಳು, ಯಾವುದೇ ಸಂಸ್ಥೆಯ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶ


ಪುತ್ತೂರು: ಪುತ್ತೂರಿನ ಬಪ್ಪಳಿಗೆಯಲ್ಲಿ ಪ್ರಿ ಕೆಜಿಯಿಂದ ಹತ್ತನೆಯವರೆಗಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆ, ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯ, ಅಂಬಿಕಾ ಪದವಿ ಮಹಾವಿದ್ಯಾಲಯ ಹಾಗೂ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯ ಹೀಗೆ ನಾಲ್ಕು ವಿವಿಧ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಇದೀಗ ಪುತ್ತೂರಿಗೆ ಮಾತ್ರವಲ್ಲದೆ ಇಡಿಯ ರಾಜ್ಯ, ದೇಶಕ್ಕೆ ಮತ್ತೊಂದು ಸಂಸ್ಥೆಯನ್ನು ಪರಿಚಯಿಸುತ್ತಿದೆ. ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ಎಂಬ ಹೆಸರಿನಡಿ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಆಧುನಿಕ ಸಂವಹನ ವ್ಯವಸ್ಥೆಯನ್ನು ಬಳಸಿ ಆಸಕ್ತ ವಿದ್ಯಾರ್ಥಿಗಳಿಗೆ ಅವರಿದ್ದಲ್ಲಿಗೇ ಶಿಕ್ಷಣವನ್ನು ತಲಪಿಸುವ ನೂತನ ಯೋಜನೆ ಸದ್ಯದಲ್ಲೇ ಜಾರಿಗೊಳ್ಳಲಿದೆ.


ಸಿಎ & ಬ್ಯಾಂಕಿಂಗ್, ಸರ್ಕಾರಿ ಉದ್ಯೋಗಗಳ ಬಗೆಗಿನ ಆನ್ ಲೈನ್ ತರಬೇತಿ:
ಸಿಎ ಓದಬೇಕೆಂಬುದು ಅನೇಕ ವಿದ್ಯಾರ್ಥಿಗಳ ಕನಸು. ಆದರೆ ಸರಿಯಾದ ಮಾರ್ಗದರ್ಶನ ತರಬೇತಿಯ ಕೊರತೆ. ಕೆಲವೆಡೆ ತರಗತಿಗಳು ನಡೆಯುತ್ತವಾದರೂ ತರಗತಿಯ ಸಮಯಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೆ ಅನೇಕರು ಸಿಎ ಕನಸನ್ನೇ ಕೈಬಿಡುವುದಿದೆ. ಈ ಕಾರದಿಂದಲೇ ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ವತಿಯಿಂದ ಆನ್‌ಲೈನ್ ಸಿಎ ತರಬೇತಿ ನೀಡಲಾಗುತ್ತಿದೆ. ಇದರಿಂದಾಗಿ ಹತ್ತನೆಯ ತರಗತಿ ತೇರ್ಗಡೆಯಾದ ಯಾವ ವಿದ್ಯಾರ್ಥಿಯಾದರೂ ಈ ಆನ್‌ಲೈನ್ ಸಿಎ ತರಗತಿಗೆ ದಾಖಲಾತಿ ಮಾಡಿಸಿಕೊಳ್ಳಬಹುದು. ಜತೆಗೆ ಯಾವುದೇ ಕಾಲೇಜಿನಲ್ಲಿ ಓದುತ್ತಿರುವವರೂ ದಾಖಲಾತಿ ಹೊಂದಬಹುದು. ಇಷ್ಟಲ್ಲದೆ ಉದ್ಯೋಗಿಗಳಾಗಿರುವವರೂ ತಮ್ಮ ದಾಖಲಾತಿ ಮಾಡಿಸಿಕೊಳ್ಳಬಹುದು ಎಂಬುದು ಅನೇಕರಿಗೆ ವರದಾನವಾಗಿ ಪರಿಣಮಿಸಿದೆ. ಸಿಎ ತರಗತಿಗಳನ್ನು ಸಿಎ ತೇರ್ಗಡೆಯಾದವರೇ ನಡೆಸಿಕೊಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವೆನಿಸಿದೆ.
ಜತೆಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ ಐಬಿಪಿಎಸ್ ಕೋಚಿಂಗ್ ಕೂಡ ನುರಿತ ವ್ಯಕ್ತಿಗಳಿಂದ ನಡೆಯಲಿದೆ. ಇಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಸೃಷ್ಟಿಯಾಗುತ್ತಿದ್ದು ಸರಿಯಾದ ಮಾರ್ಗದರ್ಶನವಿಲ್ಲದೆ ಅನೇಕರು ಆ ಕ್ಷೇತ್ರದ ಬಗೆಗೆ ಗಮನ ಹರಿಸುತ್ತಿಲ್ಲ. ಜತೆಗೆ ತಮ್ಮ ಅನುಕೂಲದ ಸಮಯದಲ್ಲಿ ತರಗತಿಗಳ ಲಭ್ಯತೆ ಇಲ್ಲದಿರುವುದೂ ಬಹುತೇಕ ಮಂದಿ ಬ್ಯಾಂಕಿಂಗ್ ಕನಸನ್ನು ಮೂಲೆಗುಂಪು ಮಾಡಿಡಲು ಕಾರಣವಾಗಿದೆ. ಆದರೆ ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ಇದೀಗ ಆನ್‌ಲೈನ್ ಮುಖಾಂತರ ತರಬೇತಿ ಕೊಡಲಿರುವುದು ಅನೇಕರ ಬ್ಯಾಂಕಿಂಗ್ ಕನಸಿಗೆ ಮರುಜೀವ ನೀಡಿದೆ.
ಅಂತೆಯೇ ಸರ್ಕಾರಿ ಉದ್ಯೋಗಗಳಾದ ಎಸ್‌ಡಿಎ/ ಎಫ್‌ಡಿಎಗೆ ಸಂಬಂಧಿಸಿದಂತೆಯೂ ಆನ್‌ಲೈನ್ ಕೋಚಿಂಗ್ ಇಲ್ಲಿ ಲಭ್ಯವಿದೆ. ಬಹುತೇಕ ಪ್ರತಿ ವರ್ಷವೂ ಸರ್ಕಾರದಿಂದ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆದರೆ ಅನೇಕರಿಗೆ ಈ ಬಗೆಗೆ ಮಾಹಿತಿಯೇ ಇಲ್ಲದಿರುವುದು ಸರ್ಕಾರಿ ಉದ್ಯೋಗದಿಂದ ವಂಚಿತರನ್ನಾಗಿಸುತ್ತಿದೆ.


ತರಗತಿಗಳು ಹೇಗೆ ನಡೆಯುತ್ತವೆ? :
ಸಿಎ, ಬ್ಯಾಂಕಿಂಗ್ ಮತ್ತು ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ ದಾಖಲಾತಿ ಹೊಂದಿದ ವಿದ್ಯಾರ್ಥಿ ದಿನದ ಯಾವುದೇ ಹೊತ್ತಿನಲ್ಲಿ ಈ ತರಗತಿಗಳನ್ನು ವೀಕ್ಷಿಸಬಹುದು. ಹಳೆಯ ತರಗತಿಗಳ ವೀಕ್ಷಣೆಗೂ ಅವಕಾಶಗಳಿವೆ. ಹಾಗಾಗಿ ಆಯಾ ವಿದ್ಯಾರ್ಥಿ ತನ್ನ ಬಿಡುವಿನ ಸಮಯದಲ್ಲಿ ಈ ತರಗತಿಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇದರೊಂದಿಗೆ ವಾರದಲ್ಲಿ ಒಂದು ದಿನ ವಿದ್ಯಾರ್ಥಿಗಳ ಅನುಮಾನ ಪರಿಹಾರಗಳಿಗಾಗಿ ಆನ್‌ಲೈನ್ ಮೀಟಿಂಗ್ ನಡೆಸಲಾಗುತ್ತದೆ. ಆಯಾ ವಿಷಯಕ್ಕೆ ಸಂಬಂಧಿಸಿದ ಬೋಧಕರು ವಿದ್ಯಾರ್ಥಿಗಳ ಅನುಮಾನಗಳನ್ನು ಪರಿಹರಿಸಿಕೊಡಲಿದ್ದಾರೆ. ಇಷ್ಟಲ್ಲದೆ ತಿಂಗಳಲ್ಲಿ ಒಂದು ದಿನ ಅಗತ್ಯ ಇದ್ದವರಿಗೆ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ತಮ್ಮ ಬೋಧಕರನ್ನು ಸಂಪರ್ಕಿಸುವ, ಅಗತ್ಯವಿರುವ ಮಾಹಿತಿಯನ್ನು ಮುಖತಃ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ. ಜತೆಗೆ ಕೋರ್ಸ್ ಮುಗಿಯುವ ಮುನ್ನ ಒಂದು ಬಾರಿ ಒಂದು ವಾರದ ನೇರ ತರಗತಿಗೆ ಹಾಜರಾಗುವುದಕ್ಕೂ ವಿದ್ಯಾರ್ಥಿಗಳಿಗೆ ಅವಕಾಶ ಒದಗಿಸಿಕೊಡಲಾಗುತ್ತದೆ. ಆ ಸಂದರ್ಭದಲ್ಲಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನೂ ಕಲ್ಪಿಸಿಕೊಡಲಾಗುತ್ತದೆ.


ಯಾರು ದಾಖಲಾತಿ ಹೊಂದಬಹುದು? :
ಎಸ್‌ಎಸ್‌ಎಲ್‌ಸಿ ಪೂರೈಸಿದ ಯಾರು ಬೇಕಾದರೂ ಈ ಆನ್‌ಲೈನ್ ತರಗತಿಗಳಿಗೆ ದಾಖಲಾತಿ ಹೊಂದಬಹುದು. ಅತ್ಯಂತ ಉತ್ಕೃಷ್ಟ ಮಟ್ಟದ ಕೋಚಿಂಗ್ ಅನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ವಿಶೇಷ ಶುಲ್ಕ ರಿಯಾಯಿತಿ: ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ಪದವಿಮಹಾವಿದ್ಯಾಲಯದಲ್ಲಿ ಬಿಎ, ಬಿ.ಕಾಂ ಪದವಿಗೆ ದಾಖಲಾತಿ ಹೊಂದಿ ಸಿಎ, ಐಬಿಪಿಎಸ್ ಅಥವ ಸರ್ಕಾರಿ ಉದ್ಯೋಗಗಳ ಕೋಚಿಂಗ್ ಪಡೆಯಬಯಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಸಾಕಷ್ಟು ರಿಯಾಯಿತಿ ಘೋಷಿಸಲಾಗಿದೆ ಮಾತ್ರವಲ್ಲದೆ ಅಂತಹ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿಗಳೂ ಲಭ್ಯ ಆಗಲಿವೆ.
ಗಮನಾರ್ಹ ವಿಚಾರಗಳು :
ಸಿಎ, ಐಬಿಪಿಎಸ್ ಹಾಗೂ ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದಂತೆ ಸಿಲೆಬಸ್‌ನ ಪ್ರತಿ ಚಾಪ್ಟರ್‌ಗೆ ಸಂಬಂಧಿಸಿದಂತೆ ನೋಟ್ಸ್ ಒದಗಿಸಿಕೊಡಲಾಗುತ್ತದೆ.
ಪರೀಕ್ಷೆಯಲ್ಲಿ ಕೇಳಬಹುದಾದ ಸಾಧ್ಯಾಸಾಧ್ಯತೆಯಿರುವ ಪ್ರಶ್ನಾವಳಿಗಳು ಹಾಗೂ ಉತ್ತರಗಳನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ.
ಆಗಿಂದಾಗ್ಗೆ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಯ ಕಲಿಕಾ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ.
24×7 ಪಾಠ ಪ್ರವಚನಗಳು ಲಭ್ಯ.
ಕಾಲಕಾಲಕ್ಕೆ ಸಾಮಾನ್ಯ ಜ್ಞಾನ ಹೆಚ್ಚಿಸುವಂತಹ ತರಗತಿಗಳು
ವಾರಕ್ಕೊಮ್ಮೆ ಆನ್‌ಲೈನ್ ಮೀಟಿಂಗ್ ಮುಖಾಂತರ ವಿದ್ಯಾರ್ಥಿಗಳ ಅನುಮಾನ ಪರಿಹಾರ
ಕೋರ್ಸ್ ಮಧ್ಯೆ ಹಾಸ್ಟೆಲ್ ಸಹಿತವಾಗಿ ಒಂದು ವಾರದ ನೇರ ತರಗತಿಗಳು
ಸಾಮಾನ್ಯರ ಕೈಗೆಟಕುವ ಶುಲ್ಕ ವ್ಯವಸ್ಥೆ
ಪ್ರತಿ ವಿದ್ಯಾರ್ಥಿಯ ಬಗೆಗೂ ತೀವ್ರ ಗಮನ ಹಾಗೂ ಮಾರ್ಗದರ್ಶನ

ಟಾರ್ಗೆಟ್ ನೀಟ್ 2024: ಅಂಬಿಕಾ ಅಕಾಡೆಮಿ ಫಾರ್ ಕಾಂಪೆಟಿಟಿವ್ ಎಗ್ಸಾಮಿನೇಶನ್ಸ್ ವತಿಯಿಂದ ನೀಟ್ ರಿಪೀಟರ್‍ಸ್ ವಿದ್ಯಾರ್ಥಿಗಳಿಗಾಗಿ ಟಾರ್ಗೆಟ್ ನೀಟ್ 2024 ತರಗತಿಗಳನ್ನು ಸದ್ಯದಲ್ಲೇ ಆರಂಭಿಸಲಾಗುತ್ತದೆ. ಈ ತರಗತಿಗಳು ಆಫ್‌ಲೈನ್ ಮುಖಾಂತರ ಮಾತ್ರ ಲಭ್ಯವಿದ್ದು, ಹುಡುಗರಿಗೆ ಹಾಗೂ ಹುಡುಗಿಯರಿಗೆ ಅತ್ಯುತ್ತಮ ಹಾಸ್ಟೆಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗುತ್ತದೆ. 2023ರ ನೀಟ್ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಒಟ್ಟು ಶುಲ್ಕದಲ್ಲಿ ಶೇಕಡಾ 50ರಷ್ಟು ರಿಯಾಯಿತಿ ದೊರಕಲಿದೆ. ಅಂತೆಯೇ 450ರಿಂದ 499 ಅಂಕ ಗಳಿಸಿದವರಿಗೆ ಶೇಕಡಾ 25, 400ರಿಂದ 449ರ ನಡುವಿನ ಅಂಕ ಗಳಿಸಿದವರಿಗೆ ಶೇಕಡಾ 15ರಷ್ಟು ಶುಲ್ಕ ವಿನಾಯಿತಿ ಲಭ್ಯವಾಗಲಿದೆ.


2023ರ ನೀಟ್ ಪರೀಕ್ಷೆಯಲ್ಲಿ ಅಂಬಿಕಾ ಸಂಸ್ಥೆಯಿಂದ ಪುತ್ತೂರು ತಾಲೂಕಿನಲ್ಲಿಯೇ ಅತ್ಯಧಿಕ ಮಂದಿ ಮೆಡಿಕಲ್ ಕಾಲೇಜುಗಳಿಗೆ ದಾಖಲಾತಿ ಪಡೆದಿರುವುದು ಸಂಸ್ಥೆಯ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಂಪರ್ಕ ಸಂಖ್ಯೆ :9448835488 / 9449102082 / 08251 295688

LEAVE A REPLY

Please enter your comment!
Please enter your name here