





ಪುತ್ತೂರು:ಪುರುಷರಕಟ್ಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಹಲ್ಲೆ ನಡೆದ ಘಟನೆ ಜೂ.20ರಂದು ನಡೆದಿದ್ದು, ಗಾಯಗೊಂಡ ವ್ಯಕ್ತಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಪುರುಷರಕಟ್ಟೆ ಕಾಂಗ್ರೆಸ್ 188ನೇ ಬೂತ್ ಸಮಿತಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್ ಅಚಾರ್ಯ ಹಲ್ಲೆಗೊಳಗಾದವರು. ‘ನಾನು ಪುರುಷರಕಟ್ಟೆಯಲ್ಲಿರುವ ಸಮಯ ಇಂದಿರಾನಗರದ ಪ್ರವೀಣ್ ಎಂಬವರು ಏಕಾಏಕಿ ಬಂದು ಹಲ್ಲೆ ನಡೆಸಿ ತೆರಳಿದ್ದರು. ಬಳಿಕ ನಾನು ನರಿಮೊಗರು ಮನೆಗೆ ಹೋಗಿದ್ದ ಸಮಯ ಅಲ್ಲಿಗೂ ಬಂದು ಹಲ್ಲೆ ನಡೆಸಿ, ಜೀವ ಬೆದರಿಕೆಯೊಡ್ಡಿದ್ದಾರೆ’ ಎಂದು ಪ್ರವೀಣ್ ಆಚಾರ್ಯ ಆರೋಪಿಸಿದ್ದಾರೆ.














