ಜೂ.23ರಂದು ಕರಾವಳಿಯಾದ್ಯಂತ ತೆರೆಕಾಣಲಿದೆ ‘ಸರ್ಕಸ್’ ತುಳು ಸಿನಿಮಾ

0

ತುಳುನಾಡ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ
‘ಗಿರ್‌ಗಿಟ್’ ಟೀಮ್ ಮೂಲಕ ಕೋಸ್ಟಲ್‌ವುಡ್‌ಗೆ ಮತ್ತೊಂದು ಕೊಡುಗೆ
ಹಲವು ದೇಶಗಳಲ್ಲಿ ‘ಸರ್ಕಸ್’ ಪ್ರೀಮಿಯರ್ ಶೋ- ಭರ್ಜರಿ ರೆಸ್ಪಾನ್ಸ್

ಪುತ್ತೂರು: ಸಾಕಷ್ಟು ಯುವಪ್ರತಿಭೆಗಳ ಮೂಲಕ ಭರ್ಜರಿ ಸೌಂಡ್ ಮಾಡ್ತಿರೋ ಕೋಸ್ಟಲ್‌ವುಡ್‌ಗೆ ಮತ್ತೊಂದು ಭರ್ಜರಿ ಎಂಟರ್‌ಟೈನ್‌ಮೆಂಟ್ ಹೊಂದಿರೋ ಸಿನಿಮಾ ಸೇರ್ಪಡೆಯಾಗ್ತಾ ಇದೆ. ಹೌದು, ತುಳು ಭಾಷೆ, ಸಂಸ್ಕೃತಿ, ಹಾಸ್ಯದ ಸೊಗಡನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ, ಹಿಟ್ ಮೂವೀ ‘ಗಿರ್‌ಗಿಟ್’ನ ಟೀಮ್ ಮತ್ತೊಂದು ಭರ್ಜರಿ ಕಾಮಿಡಿ, ಮನರಂಜನೆ ಹೊಂದಿರೋ ‘ಸರ್ಕಸ್’ ಎನ್ನುವ ಸಿನಿಮಾವನ್ನು ಪ್ರೇಕ್ಷಕರಿಗಾಗಿ ತರ್ತಾ ಇದೆ. ಜೂ.23ರಂದು ರಿಲೀಸ್ ಆಗಲಿರೋ ಸರ್ಕಸ್ ಸಿನಿಮಾದ ಟೀಸರ್, ಟ್ರೇಲರ್, ಸಾಂಗ್ಸ್ ಎಲ್ಲವೂ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ವಿದೇಶಗಳಲ್ಲಿ ಪ್ರೀಮಿಯರ್ ಶೋಗಳು ಕೂಡ ನಡೀತಾ ಇದ್ದು, ಜಗತ್ತಿನೆಲ್ಲೆಡೆ ಇರೋ ತುಳು ಸಿನಿರಸಿಕರಿಂದ ಭರ್ಜರಿ ಮೆಚ್ಚುಗೆ ಸಿಕ್ಕಿದೆ.

ಈ ಸಿನಿಮಾದ ಡೈರೆಕ್ಟರ್ ತುಳುನಾಡ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ. ಬಿಗ್ ಬಾಸ್ ಕನ್ನಡ 9 ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿರೋ ರೂಪೇಶ್ ಶೆಟ್ಟಿ ಹಿಂದೆ ಗಿರ್‌ಗಿಟ್ ಎಂಬ ಬ್ಲಾಕ್ ಬಸ್ಟರ್ ತುಳು ಸಿನಿಮಾದ ಮೂಲಕ ಯಶಸ್ಸು ಕಂಡಿದ್ದರು. ಇದೀಗ ‘ಸರ್ಕಸ್’ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಗಿರ್‌ಗಿಟ್ ನಂತರ ರೂಪೇಶ್ ಶೆಟ್ಟಿ ನಿರ್ದೇಶನದ ಚಿತ್ರ ಇದಾಗಿದ್ದು, ಚಿತ್ರಕ್ಕೆ ಶೂಲಿನ್ ಫಿಲಂಸ್, ಮುಗ್ರೋಡಿ ಫಿಲಂಸ್, ಮಂಜನಾಥ್ ಅತ್ತಾವರ್ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.

ಅರವಿಂದ್ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ, ಬೈಲೂರು, ಸಂದೀಪ್ ಶೆಟ್ಟಿ ಸೇರಿದಂತೆ ತುಳು ಚಿತ್ರರಂಗದ ದಿಗ್ಗಜರ ದಂಡೇ ಈ ಚಿತ್ರದಲ್ಲಿದೆ. ಕನ್ನಡ ಚಿತ್ರ ಸಲಗ ಖ್ಯಾತಿಯ ಯಶ್ ಶೆಟ್ಟಿ ಈ ಚಿತ್ರದ ಮೂಲಕ ಮೊದಲ ಬಾರಿಗೆ ತುಳುವಿನಲ್ಲಿ ಅಭಿನಯಿಸುತ್ತಿದ್ದಾರೆ. ನವೀನ್ ಶೆಟ್ಟಿ ನೃತ್ಯ ಸಂಯೋಜನೆ, ನಿರಂಜನ್ ದಾಸ್ ಕ್ಯಾಮರಾ, ರಾಹುಲ್ ವಸಿಷ್ಠ ಸಂಕಲನದ ಜವಾಬ್ದಾರಿ ವಹಿಸಿದ್ದಾರೆ.
ಈಗಾಗಲೇ ಸರ್ಕಸ್ ಸಿನಿಮಾದ ಹಾಡುಗಳು ರಿಲೀಸ್ ಆಗಿವೆ. ಸರ್ಕಸ್ ಟ್ರೈಟಲ್ ಟ್ರ್ಯಾಕ್ ಹಾಗೂ ಓಹ್ ಬೇಬಿ ಗರ್ಲ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಲಾಯ್ ವಾಲೆಂಟೈನ್ ಸಲ್ದಾನ ಸಂಗೀತ ನೀಡಿರುವ ಸರ್ಕಸ್ ಟೈಟಲ್ ಸಾಂಗ್‌ಗೆ ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದರೆ, ಚಂದನ್ ಶೆಟ್ಟಿ ಗಾನಸುಧೆ ಹರಿಸಿದ್ದಾರೆ. ಇನ್ನು ಓಹ್ ಬೇಬಿ ಗರ್ಲ್ ಹಾಡನ್ನ ನಿಹಾಲ್ ತಾವ್ರೋ ಹಾಡಿದ್ದಾರೆ.

ಜೂ. 23ರಂದು ತುಳುನಾಡಿನಾದ್ಯಂತ ಸಿನಿಮಾ ರಿಲೀಸ್ ಆಗಲಿದ್ದು, ಈಗಾಗಲೇ ದುಬೈ, ಮಸ್ಕತ್- ಓಮನ್‌ನಲ್ಲಿ ಸಿನಿಮಾ ಪ್ರೀಮಿಯರ್ ಪ್ರದರ್ಶನ ಕಂಡಿದೆ. ಜೊತೆಗೆ ಬಹ್ರೇನ್, ಕತಾರ್‌ನಲ್ಲೂ ಕೂಡ ಪ್ರೀಮಿಯರ್ ಶೋ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ಅಲ್ಲಿನ ತುಳುಪ್ರೇಮಿಗಳು ಸಿನಿಮಾ ನೋಡಿ ನಕ್ಕು ಆನಂದಿಸಿದ್ದಾರೆ. ಇದೀಗ ಎಲ್ಲೆಲ್ಲೂ ಸರ್ಕಸ್‌ನದ್ದೇ ಸೌಂಡ್ ಕೇಳ್ತಾ ಇದ್ದು ಜೂ.23ರಿಂದ ಸಿನಿಪ್ರಿಯರಿಗೂ ಭರ್ಜರಿ ರಸದೌತಣ ಲಭಿಸಲಿದೆ.

LEAVE A REPLY

Please enter your comment!
Please enter your name here