ಹಜ್ ಯಾತ್ರೆ ಕೈಗೊಂಡ ಮಹಮ್ಮದ್ ಜೆ.ಜೆ.ಬಿ ಅವರಿಗೆ ಪರ್ಪುಂಜ ಮಸೀದಿಯಲ್ಲಿ ಬೀಳ್ಕೊಡುಗೆ ಸನ್ಮಾನ

0

ಪುತ್ತೂರು: ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಪರ್ಪುಂಜ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮಹಮ್ಮದ್ ಜೆಜೆಬಿ ಅವರನ್ನು ಪರ್ಪುಂಜ ಮಸೀದಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ನವಾಝ್ ಸುಪ್ರಿಂರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.


ಮಸೀದಿಯ ಖತೀಬ್ ಶಾಕಿರ್ ನಿಝಾಮಿ ದುವಾ ನೆರವೇರಿಸಿದರು. ಸದರ್ ಅಬ್ದುಲ್ ರಹಿಮಾನ್ ಝುಹುರಿ, ಪರ್ಪುಂಜ ಮಸೀದಿಯ ಉಪಾಧ್ಯಕ್ಷ ಶರೀಫ್ ಪಿ.ಪಿ, ಕಾರ್ಯದರ್ಶಿ ಹಂಝ ಎಂ, ಜೊತೆ ಕಾರ್ಯದರ್ಶಿ ನಝೀರ್ ಪಿ, ಮಾಜಿ ಅಧ್ಯಕ್ಷ ಶರೀಫ್ ಹಾಜಿ ಸರ್ವೆ, ಹನೀಫ್ ಭಾರತ್, ರಶೀದ್ ಮತ್ತಿತರರು ಉಪಸ್ಥಿತರಿದ್ದರು. ಜಮಾಅತ್ ಕಮಿಟಿ ಸದಸ್ಯರು, ಯಂಗ್‌ಮೆನ್ಸ್ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here