ಝೀ ಕನ್ನಡ ಛೋಟಾ ಚಾಂಪಿಯನ್ ಗೇಮ್ ಶೋನಲ್ಲಿ ರಾಮಕುಂಜದ ಆತ್ಮಿ ಗೌಡ

0

ಜೂ.24,25-ಎಪಿಸೋಡ್ ಪ್ರಸಾರ

ರಾಮಕುಂಜ: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಕ್ಕಳ ನಂ.1 ಗೇಮ್ ಶೋ ಛೋಟಾ ಚಾಂಪಿಯನ್‌ನಲ್ಲಿ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಸುಜಿತ್ ಹಾಗೂ ಉಮಾಶ್ರೀ ಪಿ.ಬಿ. ದಂಪತಿ ಪುತ್ರಿ, ಎಸ್.ಆತ್ಮಿ ಗೌಡ (3ವರ್ಷ 11ತಿಂಗಳು) ಆಯ್ಕೆಯಾಗಿದ್ದು ಜೂನ್ 24ರ ಶನಿವಾರ ಮತ್ತು ಜೂನ್ 25ರ ಭಾನುವಾರದಂದು ಸಂಜೆ 6 ಗಂಟೆಗೆ ಈ ಎಪಿಸೋಡ್ ಪ್ರಸಾರಗೊಳ್ಳಲಿದೆ.


ಹತ್ತು ವರ್ಷಗಳ ಹಿಂದೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಕ್ಕಳ ಗೇಮ್‌ಶೋ ಕಾರ್ಯಕ್ರಮದ ನಿರೂಪಣೆಯನ್ನು ಈ ಬಾರಿ ಶ್ವೇತಾ ಚಂಗಪ್ಪ ಮತ್ತು ಕುರಿ ಪ್ರತಾಪ್ ನಡೆಸಿಕೊಡುತ್ತಿದ್ದು ಇದರಲ್ಲಿ 2 ರಿಂದ 6 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ. ಬೆಂಗಳೂರಿನಲ್ಲಿ ನಡೆದ ಆಡಿಷನ್‌ನಲ್ಲಿ ಆಯ್ಕೆಯಾಗಿ ಅನಂತರ ನಡೆದ 3 ಸುತ್ತಿನ ಆಡಿಷನ್‌ನಲ್ಲಿ ಭಾಗವಹಿಸಿ ಆತ್ಮಿಗೌಡ ಅವರು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಶೋದಲ್ಲಿ ಪುಟಾಣಿ ಆತ್ಮಿ ಗೌಡ ಜೊತೆಗೆ ತಂದೆ ಸುಜಿತ್ ಹಾಗೂ ತಾಯಿ ಉಮಾಶ್ರೀಯವರೂ ಕಾಣಿಸಿಕೊಳ್ಳಲಿದ್ದಾರೆ.


ಆತ್ಮಿ ಗೌಡ ಸಂಪ್ಯಾಡಿ ನಿವಾಸಿ ಕೆಎಸ್‌ಆರ್‌ಟಿಸಿ ನಿವೃತ್ತ ಉದ್ಯೋಗಿ ಕೆ.ಜೋಗಪ್ಪ ಗೌಡ ಮತ್ತು ನಿವೃತ್ತ ಶಿಕ್ಷಕಿ ಚಂದ್ರಾವತಿ ದಂಪತಿಯ ಮೊಮ್ಮಗಳು. ರಾಮಕುಂಜ ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನ ಎಲ್‌ಕೆಜಿ ಪುಟಾಣಿ. ಈ ಬಾರಿ ಛೋಟಾ ಚಾಂಪಿಯನ್ ವೇದಿಕೆಯಲ್ಲಿ ಬೆಂಗಳೂರು ಬಾಯ್ಸ್ ಚಿತ್ರ ತಂಡದವರು ಅತಿಥಿಗಳಾಗಿ ಭಾಗವಹಿಸಿದ್ದರು. ಈ ಚಿತ್ರ ತಂಡದವರಾದ ಅಭಿಷೇಕ್ ರಾಮ್‌ದಾಸ್, ಚಂದನ್ ಆಚಾರ್, ರೋಹಿತ್ ಭಾನುಪ್ರಕಾಶ್, ವೈನಿಧಿ ಜಗದೀಶ, ಸೋನಿ, ಧರ್ಮವಿಶ್, ವಿಕ್ರಮ್ ಎಲೈಹ್‌ರವರು ಭಾಗವಹಿಸಿ ಮಕ್ಕಳಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here