ಮುಂಡೂರು ಶಾಲಾ ನಾಯಕನಾಗಿ ನಿಹಾಲ್ ರೈ ; ಉಪನಾಯಕನಾಗಿ ಮಹಮ್ಮದ್ ಅನಸ್ ಆಯ್ಕೆ

0

ಪುತ್ತೂರು: ಮುಂಡೂರು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ಶಾಲಾ ಸಂಸತ್ತು ರಚನೆ ಚುನಾವಣೆಯ ಮೂಲಕ ನಡೆಯಿತು. ನಾಮಪತ್ರಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನದ ಫಲಿತಾಂಶ ಘೋಷಣೆ ಹೀಗೆ ಎಲ್ಲಾ ಹಂತಗಳನ್ನು ಶಾಲಾ ಸಂಸತ್ತಿನ ಚುನಾವಣೆಯಲ್ಲಿಅನುಸರಿಸಲಾಯಿತು.
ಮತದಾನದ ಸಮಯದಲ್ಲಿ ಬ್ಯಾಲೆಟ್ ಪೇಪರ್, ಮುದ್ರೆ, ಶಾಯಿ, ಗುರುತಿನ ಚೀಟಿ ಮತ್ತು ಮತ ಪೆಟ್ಟಿಗೆ ಎಲ್ಲವನ್ನೂ ವ್ಯವಸ್ಥಿತಗೊಳಿಸಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಐದು ಮಂದಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ನಾಯಕನಾಗಿ 8ನೇ ತರಗತಿಯ ಕೆ ನಿಹಾಲ್ ರೈ ಆಯ್ಕೆಯಾದರೆ, ಉಪನಾಯಕನಾಗಿ 7ನೇ ತರಗತಿಯ ಮಹಮ್ಮದ್ ಅನಸ್ ಆಯ್ಕೆಯಾದರು.

ಶಿಕ್ಷಣ ಮಂತ್ರಿಗಳಾಗಿ ಆಝ್ಮೀಯಾ ಹಾಗೂ ಸತ್ಯಜಿತ್, ಆರೋಗ್ಯ ಮಂತ್ರಿಗಳಾಗಿ ಅನಿಲ್ ಹಾಗೂ ಪೂರ್ಣಿಮಾ, ಆಹಾರ ಮಂತ್ರಿಗಳಾಗಿ ರಮೀಝಾ, ಫಾರಿಸ, ಹಾಗೂ ಪುರುಷೋತ್ತಮ, ಕ್ರೀಡಾ ಮಂತ್ರಿಗಳಾಗಿ ಶರಣ್ಯ ಹಾಗೂ ಶರಣ್ಯಶ್ರೀ, ರಕ್ಷಣಾ ಮಂತ್ರಿಗಳಾಗಿ ಋತೇಶ್, ರಾಕೇಶ್, ಸಮ್ನ ಹಾಗೂ ಧನುಷ್, ನೀರಾವರಿ ಮಂತ್ರಿಗಳಾಗಿ ಅನ್ಸಿಫ್, ಕೀರ್ತನ್ ಹಾಗೂ ಹರ್ಷತ್, ಸ್ವಚ್ಛತಾ ಮಂತ್ರಿಗಳಾಗಿ ಮನ್ಮಿತಾ, ನಿಧೀಶ ಹಾಗೂ ಆಫ್ರೀಝ್, ಗ್ರಂಥಾಲಯ ಮಂತ್ರಿಗಳಾಗಿ ನಿರೀಕ್ಷಾ ಹಾಗೂ ದೀಕ್ಷಾ, ತೋಟಗಾರಿಕಾ ಮಂತ್ರಿಗಳಾಗಿ ಪುನೀತ್ ಹಾಗೂ ಆಫೀಝ್, ವಿರೋಧ ಪಕ್ಷದನಾಯಕನಾಗಿ ಮನೀಷ್‌ಆಯ್ಕೆಯಾದರು. ಮುಖ್ಯ ಗುರು ವಿಜಯಾ ಪಿ ಮಾರ್ಗದರ್ಶನದಲ್ಲಿ ಮುಖ್ಯ ಚುನಾವಣಾಧಿಕಾರಿಯಾಗಿ ಶಾಲೆಯ ಜಿಪಿಟಿ ಶಿಕ್ಷಕಿ ಸಂಧ್ಯಾ ಕರ್ತವ್ಯ ನಿರ್ವಹಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here