ಶತಾಯುಷಿ ಸೋಮಪ್ಪ ಪೂಜಾರಿ ನಿಧನ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಕುರುಬರಪಾಲು ನಿವಾಸಿ, ಶತಾಯುಷಿ ಸೋಮಪ್ಪ ಪೂಜಾರಿ ಅವರು ಜೂ.11ರಂದು ಸ್ವಗೃಹದಲ್ಲಿ ನಿಧನರಾದರು.


ಪ್ರಗತಿಪರ ಕೃಷಿಕರಾಗಿದ್ದ ಸೋಮಪ್ಪ ಪೂಜಾರಿಯವರಿಗೆ 110 ವರ್ಷ ವಯಸ್ಸಾಗಿತ್ತು. ತನ್ನ ಕೊನೆಯ ದಿನದಲ್ಲೂ ಇವರು ಲವಲವಿಕೆಯಿಂದ ಓಡಾಡುತ್ತಿದ್ದರು. ಮೃತರು ಮಕ್ಕಳಾದ ಅಪ್ಪಿ ಕುರುಬರಪಾಲು, ಹೊನ್ನಮ್ಮ, ರತ್ನಾವತಿ ಸಜಿಪ, ಜನಾರ್ದನ ಪೂಜಾರಿ, ನಾಣ್ಯಪ್ಪ ಪೂಜಾರಿ, ಸುಶೀಲ ಬರಮೇಲು, ಚಂದ್ರ ಪೂಜಾರಿ, ದೇಜಮ್ಮ ಎರ್ಮಾಳ, ನಳಿನಿ ಕುಶಾಲನಗರ, ಸಹೋದರ ಶತಾಯುಷಿ ಹರಿಯಪ್ಪ ಪೂಜಾರಿ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here