ಮರ್ದಾಳ ಗುಡ್‌ಶೆಫರ್ಡ್ ಆ.ಮಾ.ಪ್ರೌಢಶಾಲೆ ಮಂತ್ರಿಮಂಡಲ ರಚನೆ

0

ಕಡಬ: ಮರ್ದಾಳ ಗುಡ್‌ಶೆಫರ್ಡ್ ಆಂಗ್ಲಮಾಧ್ಯಮ ಪ್ರೌಢಶಾಲೆಯ 2023-24ನೇ ಸಾಲಿನ ಮಂತ್ರಿಮಂಡಲದ ಚುನಾವಣಾ ಪ್ರಕ್ರಿಯೆ ಜೂ.24ರಂದು ಗಣಕೀಕೃತ ವಿದ್ಯುನ್ಮಾನ ಮತ ಯಂತ್ರದ ಮೂಲಕ ನಡೆಸಲಾಯಿತು. ಶಾಲಾ ಸಂಚಾಲಕರಾದ ತೋಮಸ್ ಪಿ.ವಿ., ಶಾಲಾ ಮುಖ್ಯಶಿಕ್ಷಕ ಪ್ರಿಯಾ ಕಿಶೋರ್, ಶಾಲಾ ಶೈಕ್ಷಣಿಕ ಸಲಹೆಗಾರ ಮೇಫಿ ಹಾಗೂ ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.


ಶಾಲಾ ವಿದ್ಯಾರ್ಥಿ ನಾಯಕನಾಗಿ ಹರ್ಷಿತ್ ಜಿ.ನಾಯಕ್, ಉಪನಾಯಕನಾಗಿ ಮೋಕ್ಷಿತ್ ಕೆ.ವಿ., ಶಿಕ್ಷಣ ಮಂತ್ರಿಯಾಗಿ ಅನುಷ್, ಕ್ರೀಡಾ ಮಂತ್ರಿಯಾಗಿ ಮೊಹಮ್ಮದ್ ಶಾಹಿಲ್, ಸಾಂಸ್ಕೃತಿಕ ಮಂತ್ರಿಯಾಗಿ ವೈಶಾಕ್, ಶಿಸ್ತಿನ ಮಂತ್ರಿಯಾಗಿ ಮೋಹನ್ ಹಾಗೂ ಆರೋಗ್ಯ ಮಂತ್ರಿಯಾಗಿ ಝಿಯಾನ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here