ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರ ಸಂಘದ ಠೇವಣಿದಾರರಿಗೆ ಕೊಡೆ ವಿತರಣೆ

0

ನೆಲ್ಯಾಡಿ: ಕಾಮಧೇನು ಮಹಿಳಾ ಸಹಕಾರ ಸಂಘ ನೆಲ್ಯಾಡಿ ಇಲ್ಲಿ ಜೂ.1ರಿಂದ 30ರ ತನಕ ಠೇವಣಿ ಇಡುವ ಗ್ರಾಹಕರಿಗೆ ಆಕರ್ಷಕ ಬಡ್ಡಿದರ ಹಾಗೂ ಬಣ್ಣದ ಕೊಡೆಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಅದರಂತೆ ಠೇವಣಿ ಇಟ್ಟ ಠೇವಣಿದಾರರಿಗೆ ಸಂಘದ ಮಾಸಿಕ ಸಭೆಯಲ್ಲಿ ಕೊಡೆ ವಿತರಣೆ ಮಾಡಲಾಯಿತು.
ಸಂಘದ ಅಧ್ಯಕ್ಷೆ ಉಷಾ ಅಂಚನ್‌ರವರು ಕೊಡೆ ವಿತರಣೆ ಮಾಡಿ ಶುಭಹಾರೈಸಿದರು. ಸಾಂದ್ರಾ ಬ್ಯೂಟಿಪಾರ್ಲರ್‌ನ ಮಾಲಕಿ ರೋಸಮ್ಮ, ಸಂಘದ ನಿರ್ದೇಶಕರು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here