ಪೇರಲ್ತಡ್ಕ ಒಕ್ಕೂಟದ ವತಿಯಿಂದ ಶಾಲೆಗೆ ಟೇಬಲ್ ಕೊಡುಗೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಪೇರಲ್ತಡ್ಕ ಒಕ್ಕೂಟದ ವತಿಯಿಂದ ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಪೇರಲ್ತಡ್ಕ ಇಲ್ಲಿಗೆ ಕೊಡುಗೆಯಾಗಿ ನೀಡಿದ ಎರಡು ಟೇಬಲ್ ಗಳನ್ನು ಜೂ.26 ರಂದು ಶಾಲೆಗೆ ಹಸ್ತಾಂತರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಮತ್ತು ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ ಹಸ್ತಾಂತರಿಸಿದರು. ಸೇವಾ ಪ್ರತಿನಿಧಿ ಲೀಲಾವತಿ.ಡಿ, ಒಕ್ಕೂಟದ ಉಪಾಧ್ಯಕ್ಷೆ ಮಮತಾ, ಪದಾಧಿಕಾರಿಗಳು ಹಾಗೂ ಸದಸ್ಯರು, ಎಸ್.ಡಿ.ಎಂ.ಸಿ ಅಧ್ಯಕ್ಷ ಹನೀಫ್ ಹಾಗೂ ಸದಸ್ಯರು, ಮುಖ್ಯ ಗುರು ಜಾನಕಿ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here