ನೆಲ್ಯಾಡಿ ಜ್ಞಾನೋದಯ ಬೆಥನಿ ಶಾಲಾ ಸಚಿವ ಸಂಪುಟದ ಪದಗ್ರಹಣ

0

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ಶಾಲಾ 2023-24ನೇ ಸಾಲಿನ ಶಾಲಾ ಸಚಿವ ಸಂಪುಟದ ಪದಗ್ರಹಣ ಕಾರ್ಯಕ್ರಮ ಜೂ.27ರಂದು ಸಂಸ್ಥೆಯ ಪ್ರಾಂಶುಪಾಲ ರೆ.ಫಾ. ಥಾಮಸ್ ಬಿಜಿಲಿ ಅವರ ನೇತೃತ್ವದಲ್ಲಿ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಉಪ್ಪಿನಂಗಡಿ ಆರಕ್ಷಕ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಬಿ.ಎಸ್.ರವರು ಚುನಾಯಿತ ನಾಯಕರಿಗೆ ಅಧಿಕಾರ ಸಂಕೇತವಾದ ಶಾಲು ನೀಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿ, ಪ್ರಜಾಪ್ರಭುತ್ವದ ಮಹತ್ವವನ್ನು ವಿವರಿಸಿದರು. ಪ್ರಜಾಪ್ರಭುತ್ವ ಸರಕಾರವು ಉತ್ತಮ ನಾಯಕರನ್ನು ಬೆಳೆಸುವ ನಾಯಕತ್ವ ಗುಣವುಳ್ಳ ಬಾವಿ ಪ್ರಜೆಗಳನ್ನು ಬೆಳೆಸುವ ಸಂಕೇತವಾಗಿದೆ ಈ ನಿಟ್ಟಿನಲ್ಲಿ ಬೆಥನಿ ಸಂಸ್ಥೆಯು ಉತ್ತಮ ನಾಯಕರನ್ನು ಬೆಳೆಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಶಿಸ್ತನ್ನು ಮೂಡಿಸುತ್ತಿದೆ ಎಂದು ರವಿಕುಮಾರ್ ಬಿ.ಎಸ್.ಹೇಳಿದರು ನಾಯಕತ್ವ ಗುಣ ಎಂದರೆ ಇತರರಿಗೆ ಸಹಾಯ ಮಾಡಿ ಸಾಮಾಜಿಕ ಪಿಡುಗುಗಳನ್ನು ತೊಲಗಿಸೋದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ಅವರು ಮಕ್ಕಳಿಗೆ ಕಿವಿ ಮಾತು ಹೇಳಿದರು.


ಮುಖ್ಯ ಅತಿಥಿಗಳಿಗೆ ಸಂಸ್ಥೆಯ ಕೋಶಾಧಿಕಾರಿ ರೆ.ಫಾ. ಜೈಸನ್ ಸೈಮನ್‌ರವರು ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಲಿಯಾ ಕಾರ್ಯಕ್ರಮ ನಿರೂಪಿಸಿದರು. ಭಾವನ ವಂದಿಸಿದರು. ಪದಗ್ರಹಣ ಕಾರ್ಯಕ್ರಮದಲ್ಲಿ ಶಾಲಾ ನಾಯಕ ಮಿಲ್ಜಿತ್ ಜಾನ್ಸನ್, ಸಚಿವ ಸಂಪುಟದ ಸದಸ್ಯರಾದ ಅಕ್ಷಯ್ ಪ್ರಿನ್ಸ್, ಆಲ್ಬಿನ್ ಜೋನ್, ಶಾರೋನ್ ರೋಯಿ, ಎಸ್.ಎಮ್ ಸಾರ್ಥಕ್, ಜಿಷ್ಮಾ ಜಾನ್, ಆಶಿಶ್ ಬೋಸ್, ಫಾತಿಮತ್ ಫಿದಾ, ಅನ್ಸಲೀನಾ. ಹಾಗೂ ಇತರ ಉಪ ಮಂತ್ರಿಗಳು ಅಧಿಕಾರವನ್ನು ಸ್ವೀಕರಿಸಿದರು.


ವೇದಿಕೆಯಲ್ಲಿ ಸಂಸ್ಥೆಯ ಮುಖ್ಯಸ್ಥ ಫಾ. ಬಿಜಿಲಿ ತೋಮಸ್ ಓಐಸಿ, ಉಪ ಪ್ರಾಂಶುಪಾಲ ಜೋಸ್ ಎಂ.ಜೆ., ಪಿಯುಸಿ ವಿಭಾಗದ ಮುಖ್ಯಸ್ಥ ಸುಶೀಲ್ ಕುಮಾರ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಜಾರ್ಜ್ ಕೆ ತೋಮಸ್, ಕೋಶಾಧಿಕಾರಿ ಫಾ.ಜೈಸನ್ ಸೈಮನ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಫಾ.ಜೇಮ್ಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here