ಆಲಂಕಾರು: ಆಲಂಕಾರಿನಲ್ಲಿ ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣವಾಗಬೇಕು ಹಾಗೂ ಆಲಂಕಾರಿನಲ್ಲಿ 110 ಕೆ.ವಿ.ಎ ನಿರ್ಮಾಣವಾಗಬೇಕೆಂದು ಪುತ್ತೂರಿನ ಶಾಸಕ ಅಶೋಕ ಕುಮಾರ್ ರೈ ಅವರಿಗೆ ಮನವಿ ನೀಡಿದ್ದಾರೆ.

ಆಲಂಕಾರು ಗ್ರಾಮ ಪಂಚಾಯತ್ ನಲ್ಲಿ ಎಂಡೋ ಸಂತ್ರಸ್ಥರಿಗೆ ಶಾಶ್ವತ ಪುನರ್ವಸತಿ ಕೇಂದ್ರ ನಿರ್ಮಾಣವಾಗಬೇಕೆಂದು 5 ಎಕ್ರೆ ಜಾಗ ಹಾಗೂ ಆಲಂಕಾರಿನಲ್ಲಿ110 ಕೆ.ವಿ.ಎ ನಿರ್ಮಾಣವಾಗಬೇಕೆಂದು 3 ಎಕ್ರೆ ಜಾಗ ಕೆ.ಪಿ.ಟಿ.ಸಿ.ಎಲ್ ನವರಿಗೆ ಜಾಗ ನಿಗದಿಪಡಿಸಿದ್ದು, ಈ ಬಗ್ಗೆ ಹಲವು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳಿಂದ ಜನರು ತಮ್ಮ ಬೇಡಿಕೆಯನ್ನು ಸರಕಾರಕ್ಕೆ ಮನವಿ ಮಾಡುತ್ತಿದ್ದು ಇದೀಗ ಪುತ್ತೂರಿನ ಶಾಸಕರಾದ ಆಶೋಕ ಕುಮಾರ್ ರೈ ಯವರಿಗೆ ದ.ಕ ಜಿಲ್ಲಾ ಎಂಡೋಸಲ್ಪಾನ್ ವಿರೋಧಿ ಹೋರಾಟ ಸಮಿತಿಯ ಮೂಲಕ ಆಲಂಕಾರು ಗ್ರಾಮ ಪಂಚಾಯತ್ ನಿಗದಿಪಡಿಸಿದ ಜಾಗದಲ್ಲಿ ಎಂಡೋ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕೇಂದ್ರ ಹಾಗೂ ಆಲಂಕಾರಿನಲ್ಲಿ 110 ಕೆ.ವಿ.ಎ ನಿರ್ಮಾಣವಾಗಬೇಕೆಂದು ಪೀರ್ ಮಹಮ್ಮದ್ ಸಾಹೇಬ್ ಆಲಂಕಾರು,ರಾಧಾಕೃಷ್ಣ ರೈ ಪರಾರಿಗುತ್ತು, ಸುರೇಶ್ ಶೆಟ್ಟಿ ಕುಂಟುಪುಣಿಗುತ್ತು, ಅಬೂಬಕ್ಕರ್ ನೆಕ್ಕರೆ ಹಾಗೂ ಇನ್ನಿತರರು ಮನವಿ ಮಾಡಿದ್ದಾರೆ. ಮನವಿ ಸ್ಪಂದಿಸಿದ ಪುತ್ತೂರಿನ ಶಾಸಕರಾದ ಆಶೋಕ ಕುಮಾರ್ ರೈ ಯವರು ಈ ಬಗ್ಗೆ ಕ್ರಮ ಕೈಗೊಳ್ಳುವುದೆಂದು ಭರವಸೆ ನೀಡಿದ್ದು, ಆಲಂಕಾರು110 ಕೆ.ವಿ.ಎ ನಿರ್ಮಾಣ ದ ಕುರಿತು ಕೆ.ಪಿ.ಟಿ.ಸಿ.ಎಲ್ ಅಧಿಕಾರಿಯವರನ್ನು ದೂರವಾಣಿ ಮೂಲಕ ಸಂರ್ಪಕಿಸಿ ಮಾಹಿತಿಯನ್ನು ಪಡೆದಿದ್ದಾರೆ ಮನವಿ ಸಲ್ಲಿಸಿದ ಮನವಿದಾರರು ತಿಳಿಸಿದ್ದಾರೆ.