





ಪುತ್ತೂರು, ಜು 1: ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಲೆಕ್ಕಶಾಸ್ತ್ರ ವಿಷಯದ ಪರೀಕ್ಷಾ ಮಾದರಿ ಬಗ್ಗೆ ಕಾರ್ಯಗಾರ ನಡೆಯಿತು.ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಧರ್ ಶೆಟ್ಟಿಗಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾದರಿ, ಅಂಕಗಳು, ಉತ್ತರ ಬರೆಯುವ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು.ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಉಷಾ ಪಿ ಎಂ, ಭಾಗ್ಯಶ್ರೀ, ಗ್ರೀಷ್ಮ ಹಾಗೂ ದೇವಿಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









