ರಾಮಕುಂಜ: ಝೀ ಕನ್ನಡ ವಾಹಿನಿಯ ಛೋಚಾ ಚಾಂಪಿಯನ್ ಗೇಮ್ ಶೋ.ದಲ್ಲಿ ಭಾಗವಹಿಸಿ ಪ್ರಥಮ ಸ್ಥಾನದೊಂದಿಗೆ ರೂ.50ಸಾವಿರ ನಗದು ಬಹುಮಾನ ಗೆದ್ದಿರುವ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಸುಜಿತ್ ಹಾಗೂ ಉಮಾಶ್ರೀ ದಂಪತಿ ಪುತ್ರಿ, ಮೂರುವರೇ ವರ್ಷದ ಪುಟಾಣಿ ಆತ್ಮಿ ಗೌಡರನ್ನು ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಜು.1ರಂದು ಸಂಪ್ಯಾಡಿಯ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಒಕ್ಕಲಿಗ ಗೌಡ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಲಿಂಗಪ್ಪ ಗೌಡ ಕಡೆಂಬ್ಯಾಲ್, ಒಕ್ಕಲಿಗ ಗೌಡ ಸಂಘ ಆಲಂಕಾರು ವಲಯದ ಅಧ್ಯಕ್ಷ ರಾಮಣ್ಣ ಗೌಡ ಸುರುಳಿ, ನಿವೃತ್ತ ಪ್ರಾಂಶುಪಾಲ ಭವಾನಿಶಂಕರ ಗೌಡ ಪರಂಗಾಜೆ, ಒಕ್ಕಲಿಗ ಗೌಡ ಸಂಘದ ಕಡಬ ತಾಲೂಕು ಘಟಕದ ಉಪಾಧ್ಯಕ್ಷ ದಯಾನಂದ ಗೌಡ ಆಲಡ್ಕ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಲಂಕಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷೆ ತೇಜಸ್ವಿನಿ ಕಟ್ಟಪುಣಿಯವರು ಪುಟಾಣಿ ಅತ್ಮಿ ಗೌಡರನ್ನು ಸನ್ಮಾನಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಆತ್ಮಿ ಗೌಡ ಅವರ ತಾಯಿ ಉಮಾಶ್ರೀಯವರು ಛೋಟಾ ಚಾಂಪಿಯನ್ ಗೋಮ್ ಶೋಗೆ ಆಯ್ಕೆಯಾಗಿ ಗೋಮ್‌ಶೋದಲ್ಲಿ ಪಾಲ್ಗೊಂಡಿರುವ ಅನುಭವದ ಬಗ್ಗೆ ತಿಳಿಸಿದರು. ಗೌಡ ಸಂಘದ ವಿವಿಧ ಪದಾಽಕಾರಿಗಳಾದ ಪದ್ಮಪ್ಪ ಗೌಡ ರಾಮಕುಂಜ, ಆನಂದ ಗೌಡ ಪಜ್ಜಡ್ಕ, ಮಂಜಪ್ಪ ಗೌಡ ಕುಂತೂರು, ಬಾಲಕೃಷ್ಣ ಗೌಡ ಸಂಪ್ಯಾಡಿ, ತಿಮ್ಮಪ್ಪ ಗೌಡ ಸಂಕೇಶ, ದುರ್ಗಾಪ್ರಸಾದ್ ಸಂಪ್ಯಾಡಿ, ಪೂವಪ್ಪ ಗೌಡ ಸಂಪ್ಯಾಡಿ, ಆಶಾ ಕಾರ್ಯಕರ್ತೆ ಪದ್ಮಾವತಿ, ಅಂಗನವಾಡಿ ಶಿಕ್ಷಕಿ ಭಾಗೀರಥಿ ಸಂಪ್ಯಾಡಿ, ಹೇಮಂತ್, ಪುಟಾಣಿ ಆತ್ಮಿ ಗೌಡರ ತಂದೆ ಸುಜಿತ್ ಗೌಡ, ತಾಯಿ ಉಮಾಶ್ರೀ, ಮನೆಯವರಾದ ಜೋಗಪ್ಪ ಗೌಡ, ಚಂದ್ರಾವತಿ, ಚೇತನ್ ಗೌಡ, ಮಮತ ಚೇತನ್, ಸಚಿನ್, ಹವಿಶ್, ಶಾರ್ವಿನ್ ಉಪಸ್ಥಿತರಿದ್ದರು. ಆಲಂಕಾರು ವಲಯ ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಮಣ್ಣ ಗೌಡ ದೋಳ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಕುಂಟ್ಯಾನ ವಂದಿಸಿದರು.