ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷೆ- ಗ್ರೇಸಿ ಗೊನ್ಸಾಲ್ವಿಸ್, ಕಾರ್ಯದರ್ಶಿ:ಶ್ಯಾಮಲ ಶೆಟ್ಟಿ, ಕೋಶಾಧಿಕಾರಿ:ಮೋಹನ್ ಮುತ್ಲಾಜೆ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿದ್ದು, ಅಧ್ಯಕ್ಷೆಯಾಗಿ ಗ್ರೇಸಿ ಗೊನ್ಸಾಲ್ವಿಸ್, ಕಾರ್ಯದರ್ಶಿಯಾಗಿ ಶ್ಯಾಮಲ ಪಿ.ಶೆಟ್ಟಿ, ಕೋಶಾಧಿಕಾರಿಯಾಗಿ ಮೋಹನ್ ಮುತ್ಲಾಜೆರವರು ಅಧಿಕಾರ ಸ್ವೀಕರಿಸಲಿದ್ದಾರೆ.


ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಪ್ರಶಾಂತ್ ಶೆಣೈ, ನಿಯೋಜಿತ ಅಧ್ಯಕ್ಷರಾಗಿ ಮಹಮ್ಮದ್‌ ಸಾದಿಕ್, ಉಪಾಧ್ಯಕ್ಷರಾಗಿ ಜಬ್ಬಾರ್ ಕೆ.ಎಂ, ಜೊತೆ ಕಾರ್ಯದರ್ಶಿಯಾಗಿ ದಯಾನಂದ ಕೆ.ಎಸ್, ಸಾರ್ಜಂಟ್ ಎಟ್ ಆಮ್ಸ್೯ ಆಗಿ ಕೃಷ್ಣವೇಣಿ ರೈ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಸ್ವಾತಿ ಮಲ್ಲಾರ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಡೆನ್ನಿಸ್ ಮಸ್ಕರೇನ್ಹಸ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಡಾ.ಶಶಿಧರ್ ಕಜೆ, ಇಂಟರ್ ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಮೊಹಮದ್ ಸಾಹೇಬ್, ಯೂತ್ ಸರ್ವಿಸ್ ನಿರ್ದೇಶಕರಾಗಿ ಪ್ರಕಾಶ್ ವಿ.ಕೆ, ಚೇರ್ ಮ್ಯಾನ್ ಗಳಾಗಿ ಸುರೇಂದ್ರ ಕಿಣಿ(ದಿ ರೋಟರಿ ಫೌಂಡೇಶನ್), ಕೃಷ್ಣಮೋಹನ್ ಪಿ.ಎಸ್(ಸಿ.ಎಲ್.ಸಿ.ಸಿ), ಡಾ.ಹರಿಕೃಷ್ಣ ಪಾಣಾಜೆ(ಪಲ್ಸ್ ಪೋಲಿಯೋ), ಪೊಡಿಯ ಡಿಆರ್(ಟೀಚ್), ಪದ್ಮನಾಭ ಶೆಟ್ಟಿ(ಮೆಂಬರ್ ಶಿಪ್ ಡೆವಲ್ಮೆಂಟ್), ಪ್ರೆಸ್ಸಿ ಪಾಯಿಸ್(ವಿನ್ಸ್), ಜೋನ್ ಕುಟಿನ್ಹಾ(ಎಥಿಕ್ಸ್), ಉಮೇಶ್ಚಂದ್ರ (ವಾಟರ್ ಆಂಡ್ ಸ್ಯಾನಿಟೇಶನ್), ಜಯಕುಮಾರ್ ರೈ(ಜಿಲ್ಲಾ ಪ್ರಾಜೆಕ್ಟ್), ಲೋಕೇಶ್ ಆಂಡ್ ಮಹಾಲಕ್ಷ್ಮೀ ಕೆ(ಕ್ರೀಡೆ), ವಿಕ್ಟರ್ ಮಾರ್ಟಿಸ್(ಫೆಲೋಶಿಪ್), ಜಯಗುರು ಆಚಾರ್(ಪಬ್ಲಿಕ್ ಇಮೇಜ್), ಸುಧಾಕರ್ ಶೆಟ್ಟಿ(ಪಿಕ್ನಿಕ್), ಲೀನಾ ಪಾಯಿಸ್(ಸಾಂಸ್ಕೃತಿಕ), ಕಿರಣ್ ಬಿ.ವಿ(ಹಾಜರಿ), ನಟೇಶ್ ಉಡುಪ(ಕೆರಿಯರ್ ಗೈಡೆನ್ಸ್), ಪ್ರಮೋದ್ ಮಲ್ಲಾರ (ವೆಬ್ ಸೈಟ್), ಧರ್ಣಪ್ಪ ಗೌಡ(ರೋಟರ್ಯಾಕ್ಟ್), ಜೆರೋಮಿಯಸ್ ಪಾಯಿಸ್(ಇಂಟರ್ಯಾಕ್ಟ್), ಮನೋಹರ್ ಕೊಳಕಿಮಾರ್(ಬುಲೆಟಿನ್ ಎಡಿಟರ್), ಗುರುರಾಜ್(ಸಹ ಬುಲೆಟಿನ್ ಎಡಿಟರ್)ರವರು ಅಧಿಕಾರ ಸ್ವೀಕರಿಸಲಿರುವರು.


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಗ್ರೇಸಿ ಗೊನ್ಸಾಲ್ವಿಸ್ ರವರು ಲಿಗೋರಿ ಎಸ್. ಮೊಂತೇರೊ ಹಾಗೂ ಮೇರಿ ಮೊಂತೇರೊರವರ ಪುತ್ರಿಯಾಗಿ ಮಂಗಳೂರಿನಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣ ಹಂತದಿಂದ ಸ್ನಾತಕೋತ್ತರ ಪದವಿ ವರೆಗೆ ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದಲ್ಲಿ ಬಿ.ಎಸ್.ಡಬ್ಲ್ಯೂ ಪದವಿಯ ನಂತರ 2 ವರ್ಷ ಖಾಸಗಿ ಸಂಸ್ಥೆಯಲ್ಲಿ ಸೇವೆಯನ್ನು ನಿರ್ವಹಿಸಿರುತ್ತಾರೆ. 1985ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಗೆಜೆಟೆಡ್ ಅಧಿಕಾರಿಯಾಗಿ ನೇಮಕಗೊಂಡು 1985ರಿಂದ 89ರ ವರೆಗೆ ದಾವಣಗೆರೆಯಲ್ಲಿ 4 ವರ್ಷ ಸಮಾಜ ಕಲ್ಯಾಣ ಅಧಿಕಾರಿಯಾಗಿ ಸೇವೆ, 1989ರಿಂದ 2004ರವರೆಗೆ ಸಿಡಿಪಿಒ ಆಗಿ ಸುಳ್ಯದಲ್ಲಿ 3 ವರ್ಷ, ಪುತ್ತೂರಿನಲ್ಲಿ 7 ವರ್ಷ, ಬಂಟ್ವಾಳದಲ್ಲಿ 5 ವರ್ಷ ಸೇವೆ, ನಂತರ ಡೆಪ್ಯುಟಿ ಡೈರೆಕ್ಟರ್ ಹುದ್ದೆಗೆ ಭಡ್ತಿ ಹೊಂದಿ ಮಂಗಳೂರಿನಲ್ಲಿ 8 ವರ್ಷ ವಿವಿಧ ಹುದ್ದೆಯಲ್ಲಿ ಸೇವೆ. ನಂತರ Deputy Director ಹುದ್ದೆಗೆ ಭಡ್ತಿ ಹೊಂದಿ ಉಡುಪಿಯಲ್ಲಿ 5 ವರ್ಷ ಸೇವೆ ಸಲ್ಲಿಸಿ, ರಾಜ್ಯ ಮಟ್ಟದ ಹುದ್ದೆಗೆ ಭಡ್ತಿ ಹೊಂದಿ JointDirector ಆಗಿ ಸೇವೆ ಸಲ್ಲಿಸಿ, ಎಪ್ರಿಲ್ 2020ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.


ಗ್ರೇಸಿ ಗೊನ್ಸಾಲ್ವಿಸ್ ರವರು ಇಲಾಖೆಯಲ್ಲಿ ಇರುವಾಗಲೇ ರೋಟರಿ ಸಂಸ್ಥೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ನಿವೃತ್ತಿ ಜೀವನದ ಪ್ರಾರಂಭದಲ್ಲೇ 2021ರಲ್ಲಿ ರೋಟರಿ ಕ್ಲಬ್ ಸಿಟಿಯ ಸದಸ್ಯರಾಗಿರುತ್ತಾರೆ. ಇವರಿಗೆ ಸಮಾಜ ಸೇವೆಯಲ್ಲಿರುವ ಆಸಕ್ತಿಯಿಂದಾಗಿ ಸದಸ್ಯರಾಗಿ ಕೇವಲ 2 ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗುವ ಅವಕಾಶ ಒದಗಿ ಬಂದಿರುತ್ತದೆ. ಇವರು ರೋಟರಿ ಕ್ಲಬ್‌ಗೆ 2021ರಲ್ಲಿ ಸದಸ್ಯರಾಗಿ, ರೋಟರಿ ಕ್ಲಬ್ ಸಿಟಿಯ 21ನೇ ಪ್ರಪ್ರಥಮ ಮಹಿಳಾ ಅಧ್ಯಕ್ಷರಾಗಿ ಅಲಂಕರಿಸಿರುತ್ತಾರೆ.
ಪ್ರಸ್ತುತ ಗ್ರೇಸಿ ಗೊನ್ಸಾಲ್ವಿಸ್ ರವರು ಪತಿ 2023-24 ನೇ ಸಾಲಿನ ರೋಟರಿ ಅಸಿಸ್ಟೆಂಟ್ ಗವರ್ನರ್ ಆಗಿ ಆಯ್ಕೆಯಾಗಿರುವ ಗೊನ್ಸಾಲ್ವಿಸ್ ಅರ್ಥ್ ಮೂವರ್ಸ್ ಮಾಲಕ ಲಾರೆನ್ಸ್ ಗೊನ್ಸಾಲ್ವಿಸ್ ರವರೊಂದಿಗೆ ಬನ್ನೂರಿನಲ್ಲಿ ವಾಸ್ತವ್ಯ ಹೊಂದಿರುತ್ತಾರೆ.


ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಶ್ಯಾಮಲ ಪಿ.ಶೆಟ್ಟಿಯವರು ಪೆರ್ನೆ ಮುಂಡೋವಿನ ಕೋಡಿ ದಿ.ಸೇಸಪ್ಪ ಶೆಟ್ಟಿ ಮತ್ತು ಹೇಮಾವತಿ ದಂಪತಿಯ ಪುತ್ರಿಯಾಗಿ ಜನಿಸಿದ
ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಶ್ರೀರಾಮ ಪ್ರೌಢಶಾಲೆ ಪೆರ್ನೆಯಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಉಪ್ಪಿನಂಗಡಿ ಜ್ಯೂನಿಯರ್ ಕಾಲೇಜಿನಲ್ಲಿ, ಬಿಎ ಪದವಿಯನ್ನು ಧಾರವಾಡ ವಿಶ್ವವಿದ್ಯಾನಿಲಯದಲ್ಲಿ, ಬಿಎಡ್ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಗೂ ಎಂಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿರುತ್ತಾರೆ. 1994ರಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿದ ಶ್ಯಾಮಲ ಶೆಟ್ಟಿಯವರು ಪ್ರಸ್ತುತ ಸರಕಾರಿ ಪ್ರೌಢಶಾಲೆ ಇರ್ದೆ ಉಪ್ಪಳಿಗೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸ. ಪ. ಪೂ. ಕಾಲೇಜು ಬೆಟ್ಟಂಪಾಡಿಯಲ್ಲಿ 3 ವರ್ಷಗಳ ಕಾಲ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಪುತ್ತೂರು ಮಹಿಳಾ ಬಂಟರ ಸಂಘದ ನಿರ್ದೇಶಕರಾಗಿರುವ ಇವರು ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದಾರೆ. 2017-18ರಲ್ಲಿ ರೋಟರಿ ಸಿಟಿಯ ಸದಸ್ಯರಾಗಿ ಸೇರಿದ ಇವರು ಟೀಚ್ ಹಾಗೂ ವಿನ್ಸ್ ಚೇರ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದಾರೆ. ಶ್ಯಾಮಲ ಶೆಟ್ಟಿಯವರು ಪತಿ, ನಿವೃತ್ತ ಶಿಕ್ಷಕ ಪದ್ಮನಾಭ ಶೆಟ್ಟಿ ಹಾಗೂ ಬೆಂಗಳೂರಿನ ರೇವಾ(Reva) ವಿಶ್ವವಿದ್ಯಾನಿಲಯದಲ್ಲಿ ಬಯೋ ಇನ್ಫಾರ್ಮೇಶನ್ ನಲ್ಲಿ ಎಂಎಸ್ಸಿ ವಿದ್ಯಾಭ್ಯಾಸ ಮಾಡುತ್ತಿರುವ ಮಗಳು ಅಕ್ಷತಾ ಶೆಟ್ಟಿ, ಮಂಗಳೂರಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ 2ನೇ ವರ್ಷದ ಕಂಪ್ಯೂಟರ್ ಸೈನ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗ ಆದಿತ್ಯ ಶೆಟ್ಟಿಯವರೊಂದಿಗೆ ಪುತ್ತೂರಿನ ದರ್ಬೆಯಲ್ಲಿರುವ ಮನೆ ಅಕ್ಷರದೀಪದಲ್ಲಿ ವಾಸವಾದ್ದಾರೆ.


ನೂತನ ಕೋಶಾಧಿಕಾರಿ ಪರಿಚಯ:
ಸುಳ್ಯ ತಾಲೂಕುಗುತ್ತಿಗಾರು ಗ್ರಾಮದ ಮುತ್ಲಾಜೆ ಶ್ರೀ ಸುಬ್ಬಯ್ಯಗೌಡ ಮತ್ತುಶ್ರೀಮತಿ ಉಮಾವತಿ ದಂಪತಿಗಳ ಮಗನಾಗಿ ಜನಿಸಿದ ಮೋಹನ್ ಮುತ್ಲಾಜೆ ಇವರು ಉದ್ಯಮ ಕ್ಷೇತ್ರದಲ್ಲಿ ಸ್ವಾವಲಂಬನೆಯ ಬದುಕು ಕಂಡವರು.
ಗುತ್ತಿಗಾರು ಸರಕಾರಿ ಪ್ರೌಢಶಾಲೆ ಮತ್ತು ಸುಬ್ರಹ್ಮಣ್ಯದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಪುತ್ತೂರಿನಲ್ಲಿ ಉದ್ಯೋಗವನ್ನರಸಿ ಬಂದು ಸ್ವಂತ ಉದ್ಯೋಗದ ಕನಸಿನೊಂದಿಗೆ ಮುದ್ರಣ ಕ್ಷೇತ್ರದಲ್ಲಿ ಪುತ್ತೂರಿನಲ್ಲಿ ಹಲವು ಹೊಸತನಗಳಿಗೆ ನಾಂದಿ ಹಾಡಿದವರು.ಹಲವು ಸಂಘ ಸಂಸ್ಥೆಗಳಲ್ಲೂ ಕೈಜೋಡಿಸಿಕೊಂಡು ಜೇಸಿಐ ಪುತ್ತೂರು, ರೋಟರಿ ಕ್ಲಬ್ ಪುತ್ತೂರು ಸಿಟಿ ಹೀಗೆ ಸಂಘ ಸಂಸ್ಥೆಗಳೊಡನೆ ಸೇರಿಕೊಂಡು ಸ್ನೇಹಪರ ಬದುಕನ್ನು ಕಂಡವರು. ಪ್ರಸ್ತುತ ಪುತ್ತೂರಿನ ಎ.ಪಿ.ಎಂ.ಸಿ ರಸ್ತೆಯ ಕ್ರಿಸ್ಟೋಫರ್‌ ಕಾಂಪ್ಲೆಕ್ಸ್‌ನಲ್ಲಿ ಮೋಹನ್‌ ಗ್ರಾಫಿಕ್ಸ್ ಎಂಬ ಸಂಸ್ಥೆಯನ್ನು ಕಳೆದ 16 ವರ್ಷಗಳಿಂದ ನಡೆಸುತ್ತಿದ್ದಾರೆ ಇವರ ಉದ್ಯಮ ಕ್ಷೇತ್ರದ ಸಾಧನೆಗೆ ಜೇಸಿಐ ಪುತ್ತೂರಿನ ವತಿಯಿಂದ 2020ರಲ್ಲಿ ಜೇಸಿಐ ಸಾಧನಾಶ್ರೀ ಪ್ರಶಸ್ತಿ ಲಭಿಸಿದೆ. ಪತ್ನಿ ಶ್ರೀಮತಿ ಆಶಾ ಮೋಹನ್, ಪುತ್ರ ಪ್ರಾರ್ಥನ್ ಮುತ್ಲಾಜೆ ಹಾಗೂ ಪುತ್ರಿ ಪೃಥ್ವಿ ಮುತ್ಲಾಜೆ ಇವರೊಂದಿಗೆ ಪುತ್ತೂರಿನಲ್ಲಿ ಸಾಂಸಾರಿಕ ಜೀವನ ನಡೆಸುತ್ತಿರುವ ಶ್ರೀಯುತರು ಸ್ನೇಹಪರ ವ್ಯಕ್ತಿತ್ವದಿಂದ ನಮ್ಮೊಡನೆ ಗುರುತಿಸಿಕೊಂಡವರು.

ಜು.4 ರಂದು ಪದ ಪ್ತದಾನ…
ರೋಟರಿ ಕ್ಲಬ್ ಪುತ್ತೂರು ಸಿಟಿಯ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜು.4 ರಂದು ಸಂಜೆ ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಜರಗಲಿದೆ. ಪದ ಪ್ರದಾನ ಅಧಿಕಾರಿಯಾಗಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ನಿಕಟಪೂರ್ವ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್, ವಲಯ ಸೇನಾನಿಯಾಗಿ ಅಣ್ಣಪ್ಪ ಸಾಸ್ತಾನರವರು ಭಾಗವಹಿಸಲಿರುವರು ಎಂದು ಕ್ಲಬ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here