ಪುತ್ತೂರು:”ಇಂದಿನ ಮಕ್ಕಳು ನಾಳಿನ ನಾಗರಿಕರು, ಇಂದಿನ ಮಕ್ಕಳು ನಾಳಿನ ನಾಯಕರು” ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದ ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ನಾಯಕತ್ವದ ಕುರಿತು ಅರಿವು ಮೂಡಿಸುವುದು ಅತೀ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ, ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಇದೇ ಜೂನ್ 30 ರಂದು ವಿದ್ಯಾರ್ಥಿ ನಾಯಕ, ನಾಯಕಿ ಹಾಗೂ ಶಾಲಾ ಮಂತ್ರಿಮಂಡಲವನ್ನು ವ್ಯವಸ್ಥಿತ ಚುನಾವಣಾ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಯಿತು.
ಶಾಲಾ ನಾಯಕನಾಗಿ ಹತ್ತನೇ ತರಗತಿಯ ಚಿರಾಗ್ ಡಿ. ಗೌಡ, ನಾಯಕಿಯಾಗಿ ಹತ್ತನೇ ತರಗತಿಯ ಚಿನ್ಮಯಿ ಆಯ್ಕೆಯಾಗಿರುತ್ತಾರೆ. ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ, ಶಿಕ್ಷಣ ಮಂತ್ರಿಯಾಗಿ ಕುನಾಲ್ ದೀಪಕ್ ರೆಡ್ಡಿ, ಆಹಾರ ಮಂತ್ರಿಯಾಗಿ ನೂತನ್ ಗೌಡ, ಶಿಸ್ತಿನ ಮಂತ್ರಿಯಾಗಿ ಸಾತ್ವಿಕ್ ನಾಯಕ್ ಹಾಗೂ ಶಾಲಾ ಸೂಚನಾ ಫಲಕದ ನಾಯಕಿಯಾಗಿ ಕು.ದೃಶ್ಯ ಯು.ವೈ ಆಯ್ಕೆಯಾಗಿರುತ್ತಾರೆ.
ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು ಹಾಗೂ ಶಿಕ್ಷಕ ತಂಡದಿಂದ ದೊರೆತ ಯೋಗ್ಯ ಮಾರ್ಗದರ್ಶನದಲ್ಲಿ ನಡೆದ ಈ ಚುನಾವಣಾ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳೆಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.