15000 ಕಾಂಗ್ರೆಸ್ ವೋಟು ಓಡೆಪೋಂಡು: ಬಾಬು ಶೆಟ್ಟಿ

0

ಪುತ್ತೂರು: ಕಳೆದ 5 ವರ್ಷಗಳ ಹಿಂದೆ ಕಾಂಗ್ರೆಸ್‌ನಿಂದ ಶಕುಂತಳಾ ಟಿ ಶೆಟ್ಟಿಯವರು ಸ್ಪರ್ದೆ ಮಾಡಿದಾಗ ಅವರಿಗೆ 71 ಸಾವಿರ ವೋಟು ಸಿಕ್ಕಿತ್ತು ಆದರೆ ಈ ಬಾರಿ ಕಾಂಗ್ರೆಸ್‌ನಿಂದ ಅಶೋಕ್ ರೈ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಶಕುಂತಳಾ ಶೆಟ್ಟಿಗೆ ಸಿಕ್ಕಿದಷ್ಟು ವೋಟು ಸಿಕ್ಕಿಲ್ಲ ಹಾಗಾದರೆ ಕಾಂಗ್ರೆಸ್‌ನದ್ದೇ 15 ಸಾವಿರ ವೋಟು ಎಲ್ಲಿ ಹೋಗಿದೆ ಎಂದು ನರಿಮೊಗರು ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ಪ್ರಶ್ನಿಸಿದ್ದಾರೆ. ನರಿಮೊಗರು ಸಿ ಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ವಲಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.


ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದಿದ್ದರು. ಆ ಬಳಿಕ ಸೋತಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾವಿರಾರು ಮತಗಳ ಸೇರ್ಪಡೆಯಾಗಿದೆ, ಹೊಸ ಮತದಾರರ ಸೇರ್ಪಡೆಯಾಗಿದೆ ಆ ವೋಟು ಎಲ್ಲಿ ಹೋಯಿತು ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿದೆ. ಕಾಂಗ್ರೆಸ್ ಶಾಸಕರು ಗೆಲ್ಲಬೇಕು, ಕಾಂಗ್ರೆಸ್ ಸರಕಾರ ಬರಬೇಕು ಎಂದು ನಿಷ್ಠಾವಂತ ಕಾರ್ಯಕರ್ತ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ವೋಟು ಕೊಡಿ ಎಂದು ಕೇಳುತ್ತಿದ್ದಾರೆ ಆದರೆ ಚುನಾವಣೆ ಮುಗಿದು ಲೆಕ್ಕ ಹಾಕುವಾಗ ಕಾಂಗ್ರೆಸ್‌ನ ವೋಟುಗಳು ಎಲ್ಲಿ ಹೋಗಿದೆ ಎಂದು ಲೆಕ್ಕವೇ ಸಿಗುತ್ತಿಲ್ಲ ಎಂದು ಹೇಳಿದರು. ಆರೀತಿ ಮುಂದೆ ಆಗಬಾರದು. ನಾನು ಕಾಂಗ್ರೆಸ್ ಎಂದು ಹೇಳುತ್ತಲೇ ಕಾಂಗ್ರೆಸ್ ಗೆ ವೋಟು ಹಾಕದವರೂ ಇರಬಹುದು . ನಾವೆಲ್ಲರೂ ಸೇರಿ ಪಕ್ಷವನ್ನು ಗಟ್ಟಿಗೊಳಿಸಬೆಕಿದೆ. ಕಾಂಗ್ರೆಸ್‌ನ ನಿಷ್ಟಾವಂತ ಕಾರ್ಯಕರ್ತರಿಗೆ ನೋವಾಗದಂತೆ ನೋಡಿಕೊಳ್ಳಬೇಕಿದೆ. ಮುಂದೆ ಎಲ್ಲರೂ ಸೇರಿ ಪಕ್ಷವನ್ನು ಗಟ್ಟಿಗೊಳಿಸಬೇಕು. ಬ್ಯಾಟ್ ಸ್ಪರ್ಧೆ ಮಾಡದೆ ಬಿಜೆಪಿಯೊಂದಿಗೆ ಸೇರಿ ಸ್ಪರ್ಧೆ ಮಾಡಿದರೂ ನಮಗೆ 15000 ವೋಟು ಹೆಚ್ಚು ಬರಲೇಬೇಕಿತ್ತು ಆದರೆ 15 ಸಾವಿರ ವೋಟು ಓಡೆಗ್ ಪೋಂಡು ಎಂಬುದು ಗೊತ್ತೇ ಆಗುತ್ತಿಲ್ಲ ಎಂದು ಹೇಳಿದರು. ಸಭೆಯಲ್ಲಿ ಶಾಸಕ ಅಶೋಕ್ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಸಹಿತ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here