ಎಸ್.ಎಸ್.ಎಲ್.ಸಿ 2022-23ನೇ ಪೂರಕ ಪರೀಕ್ಷೆಯಲ್ಲಿ ಪ್ರಗತಿ ಸ್ಟಡಿ ಸೆಂಟರ್‌ಗೆ ದಾಖಲೆ 75% ಫಲಿತಾಂಶ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ 20 ವಿದ್ಯಾರ್ಥಿಗಳು ಟ್ಯೂಷನ್ ಪಡೆದಿದ್ದು ಅದರಲ್ಲಿ15 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣಗೊಂಡು ಸಂಸ್ಥೆಗೆ ಉತ್ತಮ ಹೆಸರನ್ನು ತಂದಿದ್ದಾರೆ.

ಈ ವಿದ್ಯಾರ್ಥಿಗಳಲ್ಲಿ ಸರಕಾರಿ ಪ್ರೌಢಶಾಲೆ ಕಬಕದ ಮುಫೀದಾ 6 ವಿಷಯಗಳಿಗೆ ಟ್ಯೂಷನ್ ಪಡೆದು ಕನ್ನಡ-72, ಇಂಗ್ಲೀಷ್-35, ಹಿಂದಿ-46, ಗಣಿತ-37, ವಿಜ್ಞಾನ-36, ಸಮಾಜ ವಿಜ್ಞಾನ-48 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ. ಸಂತ ಜಾರ್ಜ್ ನೆಲ್ಯಾಡಿ ಶಾಲೆಯಲ್ಲಿ 5 ವಿದ್ಯಾರ್ಥಿಗಳಲ್ಲಿ ಅನುತ್ತೀರ್ಣಗೊಂಡ ದೀಕ್ಷಿತಾ 5 ವಿಷಯಗಳಿಗೆ ಟ್ಯೂಷನ್ ಪಡೆದು ಇಂಗ್ಲೀಷ್-46, ಹಿಂದಿ-48, ಗಣಿತ-40, ವಿಜ್ಞಾನ-47, ಸಮಾಜ ವಿಜ್ಞಾನ-41 ಅಂಕಗಳನ್ನು ಪಡೆದು ಉತ್ತೀರ್ಣರಾಗಿರುತ್ತಾರೆ ಎಂದು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ ಹಾಗೂ ಪ್ರಾಂಶುಪಾಲರಾದ ಕೆ ಹೇಮಲತಾ ಗೋಕುಲ್‌ನಾಥ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here