ಕುಂಬ್ರದಲ್ಲಿ ‘ನ್ಯೂ ಜನತಾ ಟ್ರೇಡರ‍್ಸ್’ ಶುಭಾರಂಭ

0

ಪ್ರಾಮಾಣಿಕ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು-ಗಣ್ಯರ ಅಭಿಮತ

ಪುತ್ತೂರು: ಅಡಿಕೆ, ರಬ್ಬರ್, ತೆಂಗಿನಕಾಯಿ ಹಾಗೂ ಕಾಡುತ್ಪತ್ತಿ ಖರೀದಿ ಕೇಂದ್ರ ‘ನ್ಯೂ ಜನತಾ ಟ್ರೇಡರ‍್ಸ್’ ಜು.3ರಂದು ಕುಂಬ್ರ ಗೋಕುಲ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು.
ಸಂಸ್ಥೆಯನ್ನು ಉದ್ಘಾಟಿಸಿದ ಒಳಮೊಗ್ರು ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಮಾತನಾಡಿ ಪ್ರಾಮಾಣಿಕ ವ್ಯವಹಾರದಿಂದ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ‘ನ್ಯೂ ಜನತಾ ಟ್ರೇಡರ‍್ಸ್‌ನ ಮಾಲಕ ಹನೀಫ್ ಅವರು ಪ್ರಾಮಾಣಿಕ ವ್ಯವಹಾರ ಮಾಡುವ ಮೂಲಕ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು ಅವರ ಉದ್ಯಮ ಯಶಸ್ಸು ಕಾಣುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಪ್ರಗತಿಪರ ಕೃಷಿಕ ವೆಂಕಪ್ಪ ಗೌಡ ಪಾಲ್ತಾಡು ಮಾತನಾಡಿ ವ್ಯವಹಾರದಲ್ಲಿ ಪ್ರಾಮಾಣಿಕ ಬದ್ಧತೆ, ಪ್ರೀತಿ, ವಿಶ್ವಾಸ ಅಗತ್ಯ. ಈ ನಿಟ್ಟಿನಲ್ಲಿ ಹನೀಫ್ ಅವರ ಉದ್ಯಮ ಯಶಸ್ಸಿನ ಪಥದಲ್ಲಿ ಸಾಗಲಿದೆ ಎಂದು ಶುಭ ಹಾರೈಸಿದರು.

ಕೆದಂಬಾಡಿ ಗ್ರಾ.ಪಂ ಅಧ್ಯಕ್ಷ ರತನ್ ರೈ ಕುಂಬ್ರ ಮಾತನಾಡಿ ಹನೀಫ್ ಅವರು ಉತ್ತಮ ಮತ್ತು ಪ್ರಾಮಾಣಿಕ ವ್ಯವಹಾರದವರಾಗಿದ್ದು, ಅವರ ನ್ಯೂ ಜನತಾ ಟ್ರೇಡರ‍್ಸ್ ಯಶಸ್ಸು ಕಾಣುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ ಮಾತನಾಡಿ ಯಾವುದೇ ವ್ಯವಹಾರದಲ್ಲಿ ವೃತ್ತಿ ಧರ್ಮ ಇದ್ದಾಗ ಅಂತಹ ವ್ಯವಹಾರ ಅಭಿವೃದ್ಧಿ ಕಾಣುತ್ತದೆ. ವ್ಯವಹಾರದಲ್ಲಿ ಲಾಭದ ಒಂದಂಶವನ್ನು ಸಮಾಜಕ್ಕೂ ವಿನಿಯೋಗಿಸುವ ಗುಣ ನಮ್ಮಲ್ಲಿದ್ದಾಗ ಅಂತಹ ವ್ಯವಹಾರದಲ್ಲಿ ಶ್ರೇಷ್ಠತೆಯಿರುತ್ತದೆ. ಇಲ್ಲಿ ಶುಭಾರಂಭಗೊಂಡ ನ್ಯೂ ಜನತಾ ಟ್ರೇಡರ‍್ಸ್ ಯಶಸ್ವಿಯಾಗಿ ಮುನ್ನಡೆಯಲಿ, ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೈಚಾರಿನ ಹಿರಿಯ ಉದ್ಯಮಿ ಇಬ್ರಾಹಿಂ ಪಿ.ಕೆ, ಉದ್ಯಮಿ ಹಸನ್ ಹಾಜಿ ದರ್ಖಾಸ್, ಬಾಲಕೃಷ್ಣ ರೈ ಕುಂಬ್ರ, ಸುಲೈಮಾನ್ ಚೆನ್ನಾರ್, ಕೋಚಣ್ಣ ರೈ, ಮುಸ್ತಫಾ ಸುಳ್ಯ, ಅಬ್ಬಾಸ್ ಶೇಖಮಲೆ, ಕುಂಬ್ರ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಂ ಸುಂದರ್ ರೈ ಕೊಪ್ಪಳ, ಅಧ್ಯಕ್ಷ ರಫೀಕ್ ಅಲ್‌ರಾಯಾ, ಪ್ರಧಾನ ಕಾರ್ಯದರ್ಶಿ ಭವ್ಯ ಬಬ್ಲಿ, ಪದಾಧಿಕಾರಿಗಳಾದ ಮೆಲ್ವಿನ್ ಮೊಂತೆರೋ, ನಾರಾಯಣ ಪೂಜಾರಿ ಕುರಿಕ್ಕಾರ, ಪದ್ಮನಾಭ ಆಚಾರ್ಯ, ಮಾಲಕ ಹನೀಫ್ ಅವರ ಮಕ್ಕಳಾದ ಝುಹೈರ್ ಹಾಗೂ ಝಮೀರ್ ಉಪಸ್ಥಿತರಿದ್ದರು.
ನ್ಯೂ ಜನತಾ ಟ್ರೇಡರ‍್ಸ್‌ನ ಪಾಲುದಾರರಾದ ಹನೀಫ್, ಸಲಾಂ, ಫಲುಲುದ್ದೀನ್ ಅತಿಥಿಗಳನ್ನು ಸತ್ಕರಿಸಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ತಾಜುದ್ದೀನ್ ಅರಂತೋಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


LEAVE A REPLY

Please enter your comment!
Please enter your name here